Advertisement

ಉಗ್ರ ಹಾಫೀಜ್‌ ಸಯೀದ್‌ ಬಿಡುಗಡೆ: ಪಾಕ್‌ ಸಮರ್ಥನೆ

07:23 PM Nov 25, 2017 | Team Udayavani |

ಇಸ್ಲಾಮಾಬಾದ್‌ : ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಮತ್ತು ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉದ್‌ ದಾವಾ ಇದರ ಮುಖ್ಯಸ್ಥನಾಗಿರುವ ಹಾಫೀಜ್‌ ಸಯೀದ್‌ನ ಬಿಡುಗಡೆಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ಥಾನ, ಉಗ್ರರ ಮೇಲಿನ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನೀಷೇಧಗಳ ಅನುಷ್ಠಾನಕ್ಕೆ ತಾನು ಬದ್ಧನಿರುವುದಾಗಿ ಹೇಳಿಕೊಂಡಿದೆ.

Advertisement

ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಲಷ್ಕರ್‌ ಎ ತಯ್ಯಬ ಇದರ ಸ್ಥಾಪಕನಾಗಿರುವ ಹಾಫೀಜ್‌ಸಯೀದ್‌ನ ತಲೆಗೆ ಅಮೆರಿಕ ಈ ಹಿಂದೆಯೇ ಆತನ ಉಗ್ರ ಚಟುವಟಿಕೆಗಳಿಗಾಗಿ 1 ಕೋಟಿ ಡಾಲರ್‌ ಇನಾಮು ಘೋಷಿಸಿದೆ. 

ಸಯೀದ್‌ ನ ಬಿಡುಗಡೆ ಮೂಲಕ ಪಾಕ್‌ ಸರಕಾರ,  ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಗುರಿಯಾಗಿರುವ ಉಗ್ರರು ಮತ್ತು ಉಗ್ರ ಸಂಘಟನೆಗಳನ್ನು ಸೇರಿದಂತೆ ಭಯೋತ್ಪಾದಕರನ್ನು, ಕಾನೂನಿನ ಕೈಗಳಿಗೆ ಒಪ್ಪಿಸುವಲ್ಲಿ ಗಂಭೀರತೆಯನ್ನು ಹೊಂದಿಲ್ಲ ಎಂಬುದು ಸಾಬೀತಾಗಿದೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next