Advertisement

Pakistan ಜಗತ್ತಿನ ನಾಲ್ಕನೇ ಅತೀ ದೊಡ್ಡ ಸಾಲಗಾರ

12:32 AM Jul 04, 2023 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ದುಃಸ್ಥಿತಿ ಎದುರಿಸುತ್ತಿರುವ ಪಾಕಿಸ್ಥಾನ ಮುಂದಿನ 9 ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ 300 ಕೋಟಿ ಡಾಲರ್‌ ಸಾಲ ಪಡೆಯಲಿದೆ. ಈ ಮೂಲಕ ಐಎಂಎಫ್ನಿಂದ ಅತೀ ಹೆಚ್ಚು ಸಾಲ ಪಡೆದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.

Advertisement

ಅನೇಕ ವರ್ಷಗಳಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ಥಾನ, ಪ್ರಸ್ತುತ ಅತೀ ಹೆಚ್ಚು ಸಾಲ ಪಡೆದ ಜಗತ್ತಿನ ಐದನೇ ರಾಷ್ಟ್ರವಾಗಿದೆ.

ಕಳೆದ 8 ತಿಂಗಳುಗಳಿಂದ ಪಾಕಿಸ್ಥಾನದ ಸರಣಿ ಮನವಿಗಳ ಅನಂತರ 300 ಕೋಟಿ ಡಾಲರ್‌ ಸಾಲ ನೀಡುವ ಘೋಷಣೆಯನ್ನು ಗುರುವಾರ ಐಎಂಎಫ್ ಮಾಡಿತು. ಹಂತ- ಹಂತವಾಗಿ ಈ ಮೊತ್ತವನ್ನು ಮುಂದಿನ 9 ತಿಂಗಳಲ್ಲಿ ಬಿಡುಗಡೆ ಗೊಳಿಸಲಿದೆ.

ಈ ಮೊದಲು, ಐಎಂಎಫ್ನಿಂದ ಅತೀ ಹೆಚ್ಚು ಸಾಲ ಪಡೆದ ರಾಷ್ಟ್ರಗಳ ಪೈಕಿ ಕ್ರಮವಾಗಿ ಅರ್ಜೆಂಟೀನಾ (4600 ಕೋಟಿ ಡಾಲರ್‌), ಈಜಿಪ್ಟ್ (1800 ಕೋಟಿ ಡಾಲರ್‌), ಉಕ್ರೇನ್‌(1220 ಕೋಟಿ ಡಾಲರ್‌), ಈಕ್ವೆಡಾರ್‌(820 ಕೋಟಿ ಡಾಲರ್‌) ಮತ್ತು ಪಾಕಿಸ್ಥಾನ(740 ಕೋಟಿ ಡಾಲರ್‌) ಇತ್ತು. ಇದೀಗ ಈಕ್ವೆಡಾರ್‌ಗಿಂತ ಹೆಚ್ಚು ಸಾಲ ಪಡೆದು, ನಾಲ್ಕನೇ ಸ್ಥಾನಕ್ಕೆ ಏರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next