ವಾಷಿಂಗ್ಟನ್ : ‘ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ಥಾನ ಒಂದಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ :ಮಾವೋವಾದಿ ನಂಟು ಕೇಸ್: ಮಾಜಿ ಪ್ರೊಫೆಸರ್ ಸಾಯಿಬಾಬಾ ಬಿಡುಗಡೆ ಆದೇಶಕ್ಕೆ ಸುಪ್ರೀಂ ತಡೆ
ಲಾಸ್ ಏಂಜಲೀಸ್ (ಕ್ಯಾಲಿಫೋರ್ನಿಯಾ) ದಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿಯ ಸ್ವಾಗತ ಸಮಾರಂಭದಲ್ಲಿ ಈ ಟೀಕೆಗಳನ್ನು ಮಾಡಿದ್ದು, ಅವರು ಚೀನಾ ಮತ್ತು ರಷ್ಯಾ ದೇಶಗಳನ್ನೂ ಟೀಕಿಸಿದರು. ‘ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ಥಾನ ಒಂದು’ ಎಂದಿದ್ದಾರೆ.
ಚೀನ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದಂತೆ ಯುಎಸ್ ವಿದೇಶಾಂಗ ನೀತಿಯ ಬಗ್ಗೆ ಬಿಡೆನ್ ಮಾತನಾಡಿ , ಪಾಕಿಸ್ಥಾನದ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಬಿಡೆನ್ ಅವರು ಪಾಕಿಸ್ಥಾನವನ್ನು ವಿಶ್ವದ ಅತ್ಯಂತ ಅಪಾಯಕಾರಿ ದೇಶವೆಂದು ಪರಿಗಣಿಸುವುದಾಗಿ ಹೇಳುವ ಮೂಲಕ ಮಾತನ್ನು ಮುಕ್ತಾಯಗೊಳಿಸಿದರು.
“ಕ್ಸಿ ಜಿನ್‌ಪಿಂಗ್ ತನಗೆ ಬೇಕಾದುದನ್ನು ಅರ್ಥಮಾಡಿಕೊಳ್ಳುವ ಆದರೆ ಅಗಾಧವಾದ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿ. ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ? ರಷ್ಯಾದಲ್ಲಿ ಏನು ನಡೆಯುತ್ತಿದೆ ಎಂಬುದರ ಸಂಬಂಧದಲ್ಲಿ ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ? ಎಂದು ಹೇಳಿದ್ದಾರೆ.
ಬಿಡೆನ್ ಅವರ ಡೆಮಾಕ್ರಟಿಕ್ ಪಕ್ಷದ ಸಮಾರಂಭದಲ್ಲಿ ಹೇಳಿಕೆಗಳನ್ನು ಶ್ವೇತಭವನದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಬಿಡೆನ್ ಅವರ ಹೇಳಿಕೆಗಳು ಯುಎಸ್ ಜತೆಗಿನ ಸಂಬಂಧಗಳನ್ನು ಸುಧಾರಿಸುವ ಶೆಹಬಾಜ್ ಷರೀಫ್ ಸರಕಾರದ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.