Advertisement

ಚೀನ-ಪಾಕ್‌ ಕಾರಿಡಾರ್‌ ಸೌದಿಯೂ ಪಾಲುದಾರ

06:00 AM Sep 21, 2018 | Team Udayavani |

ಇಸ್ಲಾಮಾಬಾದ್‌: ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯಲ್ಲಿ ಸೌದಿ ಅರೇಬಿಯಾ ಕೂಡ ಪಾಲುದಾರನಾಗಿರಲಿದೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಪ್ರಧಾನಿ ಇಮ್ರಾನ್‌ ಖಾನ್‌ ಸೌದಿ ಅರೇಬಿಯಾಗೆ ಪ್ರಯಾಣಿಸಿ ವಾಪಸಾದ ನಂತರದಲ್ಲಿ ಪಾಕ್‌ ಈ ಘೋಷಣೆ ಮಾಡಿದೆಯಾದರೂ, ಮುಂದಿನ ತಿಂಗಳಲ್ಲಿ ಈ ವಿಚಾರ ಅಂತಿಮಗೊಳ್ಳಲಿದೆ ಎಂದು ಪಾಕ್‌ ಸಚಿವ ಫ‌ವಾದ್‌ ಚೌಧರಿ ಹೇಳಿದ್ದಾರೆ.

Advertisement

ಸಿಪಿಇಸಿಯಲ್ಲಿ ಪಾಲುದಾರಿಕೆ ವಹಿಸುವಂತೆ ಸೌದಿ ಅರೇಬಿಯಾವನ್ನು ಪಾಕಿಸ್ಥಾನ ಆಹ್ವಾನಿಸಿದೆ. ಪಾಕ್‌ ಆಕ್ರಮಿತ ವಿವಾದಿತ ಭೂಭಾಗದಲ್ಲಿ ಈ ರಸ್ತೆ ಹಾದುಹೋಗಲಿರುವುದರಿಂದ ಭಾರತ ಹಿಂದಿನಿಂದಲೂ ಯೋಜನೆಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಇದೆ. ಇಷ್ಟಾಗಿಯೂ ಸೌದಿ ಈ ಯೋಜನೆಯಲ್ಲಿ ಭಾಗವಹಿಸುತ್ತಿರುವುದು ಭಾರತಕ್ಕೆ ಕಳವಳ ಮೂಡಿಸಿದೆ.

ಈ ಯೋಜನೆಗೆ ಚೀನ ನೀಡಿದ ಸಾಲವನ್ನು ಪೂರೈಸುವುದಕ್ಕಾಗಿ ಪಾಕಿಸ್ಥಾನ ಈ ನಿಲುವು ಕೈಗೊಂಡಿದೆ ಎಂದೂ ಹೇಳಲಾಗುತ್ತಿದ್ದು, ಇದು ಸಾಲದ ಸುಳಿಗೆ ಪಾಕಿಸ್ಥಾನವನ್ನು ಸಿಲುಕಿಸುವ ಯೋಜನೆಯಲ್ಲ ಎಂದು ಚೀನ ಈ ಹಿಂದೆಯೇ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next