Advertisement

ಪಾಕ್‌ ಹಾಕಿ ಆಟಗಾರ ಮನ್ಸೂರ್‌ ಅಹ್ಮದ್‌ ನಿಧನ

06:35 AM May 13, 2018 | |

ಕರಾಚಿ: ಪಾಕಿಸ್ಥಾನದ ಖ್ಯಾತ ಹಾಕಿ ಆಟಗಾರ ಮನ್ಸೂರ್‌ ಅಹ್ಮದ್‌ ನಿಧನರಾಗಿದ್ದಾರೆ. ಅವರಿಗೆ 49 ವರ್ಷವಾಗಿತ್ತು. ಅವರು ದೀರ್ಘ‌ಕಾಲಿಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

Advertisement

ಕೆಲವು ದಿನಗಳ ಹಿಂದೆ “ತಾನು ಭಾರತಕ್ಕೆ ಆಗಮಿಸಿ ಹೃದಯ ಕಸಿ ಮಾಡಿಕೊಳ್ಳುತ್ತೇನೆ. ನನಗೆ ಸಹಾಯ ಮಾಡಿ’ ಎಂದು ಮನ್ಸೂರ್‌ ಅಹ್ಮದ್‌ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಭಾರತಕ್ಕೆ ಆಗಮಿಸಲು ಮನ್ಸೂರ್‌ಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದರೆ ಉಚಿತವಾಗಿ ಹೃದಯ ಕಸಿ ಮಾಡಿಕೊಡುವುದಾಗಿ ಫೋರ್ಟಿಸ್‌ ಆಸ್ಪತ್ರೆ ಹೇಳಿತ್ತು. ಆದರೆ ಮನ್ಸೂರ್‌ ಅಹ್ಮದ್‌ ಅವರ ಈ ಕನಸು ಕೂಡ ಈಡೇರಲಿಲ್ಲ. ಚಿಕಿತ್ಸೆ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದ ವೇಳೆಯೇ ಅವರು ಇಹಲೋಕ ತ್ಯಜಿಸಿದ್ದಾರೆ.

ಮನ್ಸೂರ್‌ ಅಹ್ಮದ್‌ 1994 ವಿಶ್ವಕಪ್‌ ಹಾಕಿ ಕೂಟದಲ್ಲಿ ಪಾಕಿಸ್ಥಾನ ತಂಡದ ಗೋಲ್‌ಕೀಪರ್‌ ಆಗಿದ್ದರು. ಪಾಕ್‌ ಪರ 1986-2000 ಅವಧಿಯಲ್ಲಿ ಒಟ್ಟು 338 ಪಂದ್ಯವನ್ನು ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next