Advertisement

ಕಾಶ್ಮೀರ ವಿಚಾರದಲ್ಲಿ ಮತ್ತೆ ಮೂಗು ತೂರಿಸಿದ ಪಾಕ್‌

06:00 AM Dec 11, 2018 | |

ಇಸ್ಲಾಮಾಬಾದ್‌: ಜಮ್ಮು-ಕಾಶ್ಮೀರದ ಜನತೆಗೆ ರಾಜತಾಂತ್ರಿಕ, ರಾಜಕೀಯ ಹಾಗೂ ನೈತಿಕವಾಗಿ ಎಲ್ಲಾ ರೀತಿಯ ಬೆಂಬಲವನ್ನು ಪಾಕಿಸ್ತಾನ ಮುಂದುವರಿಸಲಿದೆ ಎಂದು ಪಿಎಂ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಈ ಮೂಲಕ ಮತ್ತೆ ಭಾರತದ ಆಂತರಿಕ ವಿಚಾರ ದಲ್ಲಿ ಮೂಗು ತೂರಿಸಲು ಖಾನ್‌ ಯತ್ನಿಸಿದ್ದಾರೆ. ಸೋಮವಾರ ಮಾನವ ಹಕ್ಕುಗಳ ದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

Advertisement

ಅಮೆರಿಕ ರಾಯಭಾರಿ ಕಿಡಿ: ಈ ನಡುವೆ, ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಒಂದೇ ಒಂದು ಪೈಸೆ ಧನ ಸಹಾಯ ವನ್ನೂ ಅಮೆರಿಕ ನೀಡಬಾರದು ಎಂದು ವಿಶ್ವ ಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಆಗ್ರಹಿಸಿದ್ದಾರೆ.

ಭಾರತೀಯ ಅಧಿಕಾರಿ ಸಭಾತ್ಯಾಗ: ಸಾರ್ಕ್‌ ಅಧಿಕಾರಿಗಳ ಸಭೆ ಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಸಚಿವರು ಉಪಸ್ಥಿತರಿದ್ದರು ಎಂಬ ಕಾರಣಕ್ಕಾಗಿ ಪಾಕ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ರಾಜತಾಂತ್ರಿಕ ಅಧಿಕಾರಿ ಶುಭಂ ಸಿಂಗ್‌ ಸಭೆಯಿಂದ ಹೊರ ನಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next