ಇಸ್ಲಾಮಾಬಾದ್: ಭಾರತದ ಮೇಲೆ ಕೆಂಡ ಕಾರುವ ಮತ್ತು ಉಗ್ರರನ್ನು ಛೂ ಬಿಡುವ ಪಾಕಿಸ್ತಾನ ಈಗ ಹೊಸ “ಸಾಹಸ’ಕ್ಕೆ ಕೈ ಹಾಕಿದೆ.
ಮೊಘಲ್ ದೊರೆ ಝರಿಯುದ್ದೀನ್ ಬಾಬರ್‌ನ ಜೀವನಾಧಾರಿತ ಚಿತ್ರ (ಬಯೋಪಿಕ್) ನಿರ್ಮಾಣ ಮಾಡಲಿದೆಯಂತೆ.
ಅಂದ ಹಾಗೆ ಈ ಬಗ್ಗೆ ಹಣ ಹೂಡಿಕೆ ಮಾಡುತ್ತಿರುವುದು ಪಾಕಿಸ್ತಾನ ಸರ್ಕಾರವೇ.
ಆ ದೇಶದ ವಾರ್ತಾ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ಮೈಸೂರನ್ನು ಆಳಿದ ಟಿಪ್ಪು ಸುಲ್ತಾನ್ ಜೀವನಾಧಾರಿತ ಚಿತ್ರವನ್ನು ಪಾಕಿಸ್ತಾನದ ಖಾಸಗಿ ಪ್ರೊಡಕ್ಷನ್ ಹೌಸ್ ನಿರ್ಮಿಸಲಿದೆ ಎಂದೂ ಚೌಧರಿ ತಿಳಿಸಿದ್ದಾರೆ.
ಬಾಬರ್‌ನ ಬಗ್ಗೆ ಪಾಕಿಸ್ತಾನ ಸರ್ಕಾರದ ಸಿನಿಮಾ ವಿಭಾಗ ಬಾಬರ್‌ನ ಜೀವನಕ್ಕೆ ಸಂಬಂಧಿಸಿದಂತೆ ನಿರ್ಮಾಣ ಹೊಣೆ ವಹಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಗೋವಾ: ಬೀಚ್ ಗಳಲ್ಲಿ ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ; ಕೋವಿಡ್ ನಿಯಮ ಬಗ್ಗೆ ನಿರ್ಲಕ್ಷ್ಯ
2018 ಮತ್ತು 2019ರಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಟಿಪ್ಪು ಸುಲ್ತಾನ್ ಜಯಂತಿ ದಿನ, ಗೌರವ ನಮನ ಸಲ್ಲಿಸಿದ್ದರು ಮತ್ತು ಮುಕ್ತ ಕಂಠದಿಂದ ಶ್ಲಾಧಿಸಿದ್ದರು.