Advertisement

BJP ನಾಯಕನ ಕೊಲೆ ಆರೋಪಿಯನ್ನು ಪಾಕಿಗೆ ಹಸ್ತಾಂತರಿಸಿದ ಯುಎಇ

04:51 PM Jul 13, 2018 | Team Udayavani |

ಹೊಸದಿಲ್ಲಿ : ಬಿಜೆಪಿ ನಾಯಕ ಹರೇನ್‌ ಪಾಂಡೆ ಕೊಲೆ ಕೇಸಿನ ಆರೋಪಿ ಹಾಗೂ ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಫಾರೂಕ್‌ ದೇವದಿವಾಲಾ ನನ್ನು ಯುಎಇ ಪಾಕಿಸ್ಥಾನಕ್ಕೆ  ಹಸ್ತಾಂತರಿಸಿದೆ ಎನ್ನಲಾಗಿದ್ದು ಭಾರತೀಯ ತನಿಖಾಧಿಕಾರಿಗಳಿಗೆ ಇದೊಂದು ಭಾರೀ ಹಿನ್ನಡೆ ಎಂದು ತಿಳಿಯಲಾಗಿದೆ. 

Advertisement

ಆರೋಪಿ ಫಾರೂಕ್‌ ದ್ವಿವೇದಿ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂ ನ ನಿಕಟವರ್ತಿ ಎಂದು ವರದಿಗಳು ತಿಳಿಸಿವೆ. 

ಫಾರೂಕ್‌ನನ್ನು ಈಚೆಗೆ ಮುಂಬಯಿಯ ಜೋಗೇಶ್ವರಿ ಪ್ರದೇಶದ ಸ್ಯಾಮ್‌ ಎಂಬವನೊಂದಿಗೆ ದುಬೈಯಲ್ಲಿ ಬಂಧಿಸಲಾಗಿತ್ತು. ಸ್ಯಾಮ್‌ ನನ್ನು ಕೂಡ ಯುಎಇ ಅಧಿಕಾರಿಗಳು ಪಾಕಿಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ. ವಾರದ ಈ ಹಿಂದೆ ಇವರ ಗಡೀಪಾರು ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next