Advertisement

ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಜುಟ್ಟಿಗೆ ಮಲ್ಲಿಗೆ; Pakನಿಂದ ರಾತ್ರೋರಾತ್ರಿ ಕ್ಷಿಪಣಿ ಪರೀಕ್ಷೆ

09:45 AM Aug 30, 2019 | Nagendra Trasi |

ಇಸ್ಲಾಮಾಬಾದ್: ದಿವಾಳಿ ಅಂಚಿನಲ್ಲಿರುವ ಯುದ್ಧದಾಹಿ ಪಾಕಿಸ್ತಾನ ಬುಧವಾರ ತಡರಾತ್ರಿ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಘಜ್ನವಿ ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಿರುವುದಾಗಿ ಪಾಕಿಸ್ತಾನ ಮಿಲಿಟರಿ ಗುರುವಾರ ಘೋಷಿಸಿದೆ.

Advertisement

ಪಾಕಿಸ್ತಾನದ ಸೇನಾ ಮಾಧ್ಯಮ ವಕ್ತಾರ ಮೇಜರ್ ಜನರಲ್ ಅಸೀಫ್ ಗಫೂರ್ ರೋಟೆ ಈ ಬಗ್ಗೆ ಟ್ವೀಟ್ ಮಾಡಿ, 290 ಕಿಲೋ ಮೀಟರ್ ದೂರದವರೆಗೆ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ  ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಘಜ್ನವಿ  ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕ್ ಅಧ್ಯಕ್ಷ ಅರೀಫ್ ಅಲ್ವಿ ವಿಜ್ಞಾನಿಗಳ ತಂಡದ ಸಾಧನೆಗೆ ಶ್ಲಾಘಿಸಿ, ಅಭಿನಂದಿಸಿರುವುದಾಗಿ ಟ್ವೀಟ್ ನಲ್ಲಿ ಹೇಳಿದೆ. ಅಲ್ಲದೇ ಡೈರೆಕ್ಟರ್ ಜನರಲ್ ಆಫ್ ಇಂಟರ್ ಸರ್ವೀಸ್ ಪಬ್ಲಿಕ್ ಸರ್ವೀಸ್ ಪಬ್ಲಿಕ್ ರಿಲೇಶನ್ಸ್ ಕ್ಷಿಪಣಿ ಪರೀಕ್ಷೆಯ ವಿಡಿಯೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಪಾಕಿಸ್ತಾನ ಕಣಿವೆ ರಾಜ್ಯದಲ್ಲಿ ಸಂಚು ನಡೆಸಲು ಪ್ರಯತ್ನಿಸಿ ವಿಫಲವಾಗಿತ್ತು. ಅಲ್ಲದೇ ಈ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದವರೆಗೂ ಕೊಂಡೊಯ್ದು ಮುಖಂಭಂಗಕ್ಕೀಡಾಗಿತ್ತು.

ಇದೀಗ ಪಾಕಿಸ್ತಾನ ಕಳೆದ ಕೆಲವು ದಿನಗಳಿಂದ ಯುದ್ಧದ ಮಾತನಾಡುತ್ತಿದೆ. ಮತ್ತೊಂದೆಡೆ ನಿನ್ನೆ ರಾತ್ರೋರಾತ್ರಿ  ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಪಾಕ್ ರೈಲ್ವೆ ಸಚಿವ ಸಮಾರಂಭವೊಂದರಲ್ಲಿ ಅಕ್ಟೋಬರ್, ಸೆಪ್ಟೆಂಬರ್ ನಲ್ಲಿ ಭಾರತ ಪಾಕ್ ನಡುವೆ ಯುದ್ಧ ನಡೆಯುವ ಸಂಭವವಿದೆ ಎಂದು ತಿಳಿಸಿದ್ದರು.

Advertisement

ಇವೆಲ್ಲಾ ಜಟಾಪಟಿ ನಡುವೆಯೇ ಪಾಕಿಸ್ತಾನ ಪ್ರಧಾನಿ ಸಚಿವಾಲಯದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸದೇ ವಿದ್ಯುತ್ ಇಲಾಖೆ ನೋಟಿಸ್ ಜಾರಿ ಮಾಡಿದೆ. ಆರ್ಥಿಕ ಕುಸಿತದಿಂದ ಕಂಗೆಟ್ಟು ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಇತ್ತೀಚೆಗೆ ಸರಕಾರಿ ಸಭೆಯಲ್ಲಿ ಟೀ, ಕಾಫಿ, ತಿಂಡಿ ಬಿಸ್ಕೆಟ್ ನಿಷೇಧಿಸಿರುವುದಾಗಿ ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next