Advertisement
ಉದಯವಾಣಿ ಸಮಾಚಾರಬಾಗಲಕೋಟೆ: ಐ ಆ್ಯಮ್ ಸೆಂಟ್ರಲ್ ಬ್ಯೂರೋ ಇನ್ವೆಸ್ಟಿಗೇಶನ್ ಆಫೀಸರ್…ನಾವು ಹೇಳೋವರೆಗೂ ನೀವು ಎಲ್ಲೂ ಹೋಗುವಂತಿಲ್ಲ. ನಮ್ಮ ಅಧಿಕಾರಿಗಳು ನಿಮ್ಮನ್ನು ವಿಚಾರಣೆ ಮಾಡಲಿದ್ದಾರೆ. ತಕ್ಷಣ ಆನ್‌ಲೈನ್ ವಿಡಿಯೋ ಕಾಲ್‌ಗೆ ಬನ್ನಿ. ನಿಮ್ಮ ಬುದ್ಧಿವಂತಿಕೆ ತೋರಿಸಿದರೆ ಶಾಶ್ವತವಾಗಿ ಒಳಗೆ ಹೋಗ್ತಿರಿ. ನಮ್ಮ ವಿಚಾರಣೆಗೆ ನೀವು ಸ್ಪಂದಿಸಲೇಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಿಸುತ್ತೀರಿ.
ಮನೆ ಬೀಗ ಒಡೆದು ಕನ್ನ ಹಾಕಿ, ಚಿನ್ನಾಭರಣ ಕದಿಯುವ ಕಾಲ ಹಳತು. ಆ ರೀತಿ ಮಾಡಿ ಸಿಕ್ಕಿ ಹಾಕಿಕೊಳ್ಳುವ ಖದೀಮರು ಇದೀಗ ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಅದುವೇ ಆನ್‌ಲೈನ್ ವಂಚನೆ. ಈ ವಂಚನೆಯ ಜಾಲ ಇಡೀ ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ. ನೈಸ್ ಆಗಿ ಮಾತನಾಡಿ ಹಣ ಕಿತ್ತುಕೊಳ್ಳುವ ಜಾಲ ಒಂದೆಡೆ ಇದ್ದರೆ, ಮತ್ತೂಂದೆಡೆ ನಿಮ್ಮೊಂದಿಗೆ ಮೊಬೈಲ್‌ನಲ್ಲೇ ಚೆಲ್ಲಾಟವಾಡಿ ಹಣ ಕೀಳುವ ಮಹಿಳಾ ವಂಚಕಿಯರೂ ಬಹಳಷ್ಟಿದ್ದಾರೆ.
Related Articles
Advertisement
ಆದರೆ ಸಮಸ್ಯೆ ಮಾತ್ರ ಹೇಳಿಕೊಳ್ಳುತ್ತಾರೆ. ಹಣ ಕಳೆದುಕೊಂಡ ಬಳಿಕ ಅದೇನ್ ಬರುತ್ತದೆ ಬಿಡ್ರಿ, ಹೋಗಿದ್ದು ಹೋಗೈತಿ. ಇನ್ನರ ಹುಷಾರ್ ಆಗಿರಿ ಎಂದು ಸಲಹೆ ಕೊಡುವವರೇ ಹೆಚ್ಚು. ಅದೆಲ್ಲಕ್ಕಿಂತ ಮುಖ್ಯವಾಗಿ ಹೊಸ ನಂಬರ್, ಗೊತ್ತಿಲ್ಲದವರ ಧ್ವನಿ, ಭಾಷೆಯ ಕರೆ ಬಂದಾಗ ನೀವು ಯಾವುದೇ ವಂಚನೆಯ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸುವುದೇ ಸೂಕ್ತ.
ಯಾವ ರೀತಿ ವಂಚನೆಗಳು: ಆನ್‌ಲೈನ್ ವಂಚನೆಗಳು ಹಲವು ರೀತಿ ನಡೆಯುತ್ತಿವೆ. ನಿಮಗೆ ಗೊತ್ತಿಲ್ಲದಂತೆ ನಿಮ್ಮನ್ನು ಬಲೆಗೆ ಬೀಳಿಸುತ್ತಾರೆ. ಮುಖ್ಯವಾಗಿ ಮನೆಯಲ್ಲೇ ಕುಳಿತು ಆನ್‌ಲೈನ್ ವಸ್ತುಗಳ ಖರೀದಿ ವೇಳೆ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಎಂತಹದ್ದೇ ಸಂದರ್ಭದಲ್ಲೂ ಬ್ಯಾಂಕಿನ ಖಾತೆ ವಿವರ ಕೊಡಲೇಬಾರದು. ಲಾಟರಿ, ಗಿಫ್ಟ್ ಆಫರ್, ಮೊಬೈಲ್ ಲೋನ್ ಆ್ಯಪ್, ಕ್ರೆಡಿಟ್ ಕಾರ್ಡ್ ಆಫರ್, ಪಾರ್ಟ್ ಟೈಂ ಜಾಬ್ ಆಫರ್, ಮಕ್ಕಳ ಅಶ್ಲೀಲ ಚಿತ್ರಗಳ ಹೆಸರಿನಲ್ಲಿ, ಜಾಹೀರಾತು ಮೂಲಕ, ಬ್ಯಾಂಕ್ ಕೆವೈಸಿ ಅಪ್‌ಡೇಟ್ ಹೆಸರಲ್ಲಿ, ನಕಲಿ ಕಸ್ಟಮರ್ ಕೇರ್, ಆನ್‌ಲೈನ್ ಸೆಕ್ಸ್ ವರ್ಕರ್ ಹೆಸರಿನಲ್ಲೂ ನಿಮ್ಮ ಹಣ ದೋಚುವ ಜತೆಗೆ ಮಾನ-ಮರ್ಯಾದೆಯೂ ತೆಗೆಯಲಾಗುತ್ತದೆ.
ಜಾಗೃತಿ ಅತ್ಯಗತ್ಯಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಬರುವ ವಿಷಯ ಖಾತ್ರಿ ಪಡಿಸಿಕೊಳ್ಳುವವರೆಗೂ ನಂಬಬಾರದು. ಕಮೀಷನ್ ಕೊಡುವ ವ್ಯವಹಾರ, ಅತ್ಯುತ್ತಮ ಲಾಭ ಬರುವ ಉದ್ಯಮ ಹೆಸರಲ್ಲೂ ವಂಚನೆ ನಡೆದಿವೆ. ಮುಖ್ಯವಾಗಿ ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರಗಾರಿಕೆಯ ಆನ್‌ಲೈನ್ ವಂಚನೆ ನಡೆಯುತ್ತಿವೆ. ಇಂತಹ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವ ಜತೆಗೆ ನಮ್ಮ
ಜಿಲ್ಲೆಯ ಜನರು ಆನ್‌ಲೈನ್ ವಂಚನೆಯಿಂದ ದೂರ ಇರಬೇಕು ಎಂಬುದು ಜಿಲ್ಲಾ ಪೊಲೀಸ್ ಇಲಾಖೆಯ ಹಾಗೂ ನಮ್ಮ ಕಾಳಜಿ ಮೊಟ್ಟ ಮೊದಲು, ಆನ್‌ಲೈನ್ ವಂಚನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ “ಉದಯವಾಣಿ’ ಪತ್ರಿಕೆಗೆ ನಮ್ಮ ಇಲಾಖೆಯಿಂದ ಅಭಿನಂದಿಸುವೆ. ಅಪರಾಧ ಮುಕ್ತ ಬಾಗಲಕೋಟೆ ಮಾಡಬೇಕೆಂಬುದು ಇಲಾಖೆಯ ಮುಖ್ಯ ಗುರಿ. ಇದು ಅಷ್ಟು ಸುಲಭವೂ ಅಲ್ಲ. ಕೊನೆ ಪಕ್ಷ ಗೊತ್ತಿದ್ದೂ ವಂಚನೆಗೆ ಒಳಗಾಗುವುದನ್ನು ತಡೆಯಬೇಕು. ಅದಕ್ಕಾಗಿ ನಮ್ಮ ಜಿಲ್ಲೆಯ ಜನರು ಎಚ್ಚರಿಕೆಯ ಜಾಗೃತಿ ವಹಿಸಬೇಕು.
●ಅಮರನಾಥ ರಡ್ಡಿ, ಎಸ್ಪಿ, ಬಾಗಲಕೋಟೆ *ಶ್ರೀಶೈಲ ಕೆ.ಬಿರಾದಾರ