ನ್ಯೂಯಾರ್ಕ್:2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಎ ತೊಯ್ಬಾದ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿ ಹಾಗೂ 1800 ಇತರ ವ್ಯಕ್ತಿಗಳನ್ನು ಭಯೋತ್ಪಾದಕರ ಪಟ್ಟಿಯಿಂದ ಪಾಕಿಸ್ತಾನ ಕೈಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಜಾಗತಿಕ ಹಣಕಾಸು ನಿಗ್ರಹ ವಾಚ್ ಡಾಗ್ ನ ಅಂತಾರಾಷ್ಟ್ರೀಯ ಹಣಕಾಸು ನಿಗಾ ಪಡೆಯ(ಎಫ್ ಎಟಿಎಫ್) ಮೌಲ್ಯಮಾಪನದಲ್ಲಿ ಪಾಕಿಸ್ತಾನ ಇವರನ್ನೆಲ್ಲಾ ಪಟ್ಟಿಯಿಂದ ಕೈಬಿಟ್ಟಿರುವುದು ತಿಳಿದು ಬಂದಿರುವುದಾಗಿ ವರದಿ ಹೇಳಿದೆ.
2018ರ ಈ ಪಟ್ಟಿಯ ಪ್ರಕಾರ 7600 ಮಂದಿ ಹೆಸರಿತ್ತು. ಇದರಲ್ಲಿ ಕಳೆದ 18 ತಿಂಗಳುಗಳಲ್ಲಿ ಆ ಸಂಖ್ಯೆಯನ್ನು 3,800ಕ್ಕೆ ಇಳಿಸಲಾಗಿದೆ. ಇದರಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ 1,800 ಮಂದಿ ಹೆಸರನ್ನು ತೆಗೆದುಹಾಕಿರುವುದಾಗಿ ಕ್ಯಾಸ್ಟಿಲ್ಯೂಮ್ ಅಂಕಿಅಂಶ ಬಹಿರಂಗಗೊಳಿಸಿದೆ.
ಉಗ್ರರ ವಿರುದ್ಧ ಸಮರ್ಪಕವಾದ ಕ್ರಮ ತೆಗೆದುಕೊಳ್ಳದಿದ್ದರೆ ಹಣಕಾಸು ನಿರ್ಬಂಧ ವಿಧಿಸುವ ನೀತಿಯೊಂದಿಗೆ ಪ್ಯಾರಿಸ್ ಮೂಲದ ಹಣಕಾಸು ಕಾರ್ಯಪಡೆ ಟಾಸ್ಕ್ ಪಡೆ(ಎಫ್ ಎಟಿಎಫ್) ಜತೆ ಪಾಕಿಸ್ತಾನ ಸಹಮತದ ಒಪ್ಪಿಗೆ ಸೂಚಿಸಿತ್ತು ಎಂದು ವರದಿ ತಿಳಿಸಿದೆ.