Advertisement

ಪಾಕಿಸ್ಥಾನದಿಂದ ನಕಲಿ ಆರೋಗ್ಯ ಸೇತು ಬಿಡುಗಡೆ

01:51 AM Jun 10, 2020 | Hari Prasad |

ಹೊಸದಿಲ್ಲಿ: ಕೋವಿಡ್ ನ ಈ ಸಂದಿಗ್ಧತೆ ವೇಳೆ ಪಾಕ್‌ಗೆ ಯಾವುದೇ ಗೂಢಚಾರಿಗಳನ್ನು ಭಾರತದೊಳಗೆ ಬಿಡಲು ಸಾಧ್ಯ ವಾಗುತ್ತಿಲ್ಲ.

Advertisement

ಆದರೂ ಪಾಕ್‌ ನಕಲಿ ಆರೋಗ್ಯ ಸೇತು ಆ್ಯಪ್‌ ಸೃಷ್ಟಿಸಿ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸುತ್ತಿದೆ.

10 ಕೋಟಿಗೂ ಅಧಿಕ ಡೌನ್‌ಲೋಡ್‌ ಕಂಡಿರುವ, ಟಾಪ್‌ 8 ಆ್ಯಪ್ ಗಳ ಪಟ್ಟಿಯಲ್ಲಿರುವ ‘ಆರೋಗ್ಯಸೇತು’ವಿನ ನಕಲಿ ಆವೃತ್ತಿಯನ್ನು ಪಾಕಿಸ್ಥಾನ ಬಿಡುಗಡೆ ಮಾಡಿದೆ.

ಈ ಮೂಲಕ ಪಾಕ್‌ನ ಹ್ಯಾಕರ್‌ಗಳು ಭಾರತೀಯ ಪ್ರಜೆಗಳ, ಸೇನೆಯ ಮಾಹಿತಿ ಕದಿಯಲು ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್‌ ಇಲಾಖೆಯ ಐಜಿ ಯಶಸ್ವಿ ಯಾದವ್‌ ಎಚ್ಚರಿಸಿದ್ದಾರೆ.

ಮೊಬೈಲ್‌ಗ‌ಳಿಗೆ ಡೌನ್‌ಲೋಡ್‌ ಲಿಂಕ್‌ಗಳನ್ನು ಕಳುಹಿಸಿ ಈ ನಕಲಿ ಆ್ಯಪ್‌ ಅನ್ನು ಅಳವಡಿಸಲು ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ಯತ್ನಿಸುತ್ತಿದೆ.

Advertisement

ತಡೆಗೆ ಹೀಗೆ ಮಾಡಿ

– ಪ್ಲೇ ಸ್ಟೋರ್‌ ಅಥವಾ ಐಒಎಸ್‌ನಲ್ಲಿ ಮಾತ್ರವೇ ಆರೋಗ್ಯ ಸೇತು ಡೌನ್‌ಲೋಡ್‌ ಮಾಡಿ.

– ಆರೋಗ್ಯ ಸೇತು ಹೆಸರಿನಲ್ಲಿ ಬರುವ ಡೌನ್‌ಲೋಡ್‌ ಲಿಂಕ್‌ಗಳನ್ನು ಕ್ಲಿಕ್ಕಿಸಬೇಡಿ.

– ಆರೋಗ್ಯ ಸೇತುವಿನ ಎಕ್ಸ್‌ಟೆನ್ಷನ್‌ ಫೈಲ್‌ನ ಹೆಸರು gov.in ಎಂಬುದನ್ನು ನೆನಪಿಡಿ.

– ನಕಲಿ ಆ್ಯಪ್‌ನ ಎಕ್ಸ್‌ಟೆನ್ಷನ್‌ ಫೈಲ್‌ನ ಹೆಸರು ‘Apk’ ಅಂತ ಇರುತ್ತೆ. ಇದನ್ನೂ ಗಮನದಲ್ಲಿಡಿ.

– ನಿಮ್ಮ ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್‌ ಬಂದರೆ ಸೈಬರ್‌ ಪೊಲೀಸರಿಗೆ ಮಾಹಿತಿ ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next