Advertisement

ಸಿಂಧ್‌; ಹಿಂದೂ ಆರಾಧನಾ ಸ್ಥಳದ ಮೇಲೆ ರಾಕೆಟ್ ಲಾಂಚರ್‌ಗಳಿಂದ ದಾಳಿ

09:34 PM Jul 16, 2023 | Team Udayavani |

ಸಿಂಧ್: ಕರಾಚಿಯಲ್ಲಿ ಹಳೆಯ ಮಾರಿ ಮಾತಾ ದೇವಸ್ಥಾನದ ಸೋಲ್ಜರ್ ಬಜಾರ್ ನೆಲಸಮವಾದ ಒಂದು ದಿನದ ನಂತರ, ಸಿಂಧ್‌ನಿಂದ ಇದೇ ರೀತಿಯ ಘಟನೆ ವರದಿಯಾಗಿದ್ದು ಭಾನುವಾರ ಬೆಳಗ್ಗೆ ಕಾಶ್ಮೋರ್‌ನಲ್ಲಿರುವ ಹಿಂದೂ ಆರಾಧನಾ ಸ್ಥಳದ ಮೇಲೆ ಡಕಾಯಿತರ ತಂಡವು “ರಾಕೆಟ್ ಲಾಂಚರ್‌ಗಳಿಂದ” ದಾಳಿ ಮಾಡಲಾಗಿದೆ.

Advertisement

ದಾಳಿಕೋರರು ಘೌಸ್‌ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸಮುದಾಯಕ್ಕೆ ಸೇರಿದ ಪೂಜಾ ಸ್ಥಳ ಮತ್ತು ಪಕ್ಕದ ಮನೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.ಡಕಾಯಿತರು ಮನಬಂದಂತೆ ಗುಂಡು ಹಾರಿಸಿದ್ದಾರೆ, ಕಾಶ್ಮೋರ್-ಕಂಧ್‌ಕೋಟ್ ಎಸ್‌ಎಸ್‌ಪಿ ಇರ್ಫಾನ್ ಸಮ್ಮೋ ನೇತೃತ್ವದ ಪೊಲೀಸ್ ಘಟಕವು ಘಟನಾ ಸ್ಥಳಕ್ಕೆ ತಲುಪಿದ್ದಾರೆ.

ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ, “ಅಪರಿಚಿತ ವ್ಯಕ್ತಿಗಳ ಗುಂಪು ರಾಕೆಟ್ ಲಾಂಚರ್ ಗಳನ್ನು ಪೂಜಾ ಸ್ಥಳದ ಮೇಲೆ ಹಾರಿಸಿತು. ದಾಳಿಯ ಸಮಯದಲ್ಲಿ ಬಾಗಿಲು ಹಾಕಲಾಗಿತ್ತು. 8-9 ಜನರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದರು ಮತ್ತು ಎಲ್ಲರೂ ನದಿ ಪ್ರದೇಶದ ಬಳಿ ಪರಾರಿಯಾಗಿದ್ದಾರೆ. ಪೊಲೀಸರು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾಗ್ರಿ ಸಮುದಾಯದವರು ನಡೆಸುವ ಸಭೆಗಾಗಿ ಧಾರ್ಮಿಕ ಸ್ಥಳವನ್ನು ವಾರ್ಷಿಕವಾಗಿ ತೆರೆಯಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next