Advertisement

ಪಾಕ್‌ನಲ್ಲಿ 2 ಲಕ್ಷ ಜನರಲ್ಲಿ ಸೋಂಕು ;ವಿಶ್ವದಲ್ಲೇ 12ನೇ ಸ್ಥಾನಿ

04:36 PM Jun 29, 2020 | sudhir |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಕೋವಿಡ್‌ ಸೋಂಕು 2 ಲಕ್ಷಕ್ಕೇರಿದ್ದು ಈ ಮೂಲಕ ಜಗತ್ತಿನಲ್ಲೇ 12ನೇ ಸ್ಥಾನಿಯಾಗಿದೆ. ಈವರೆಗೆ ಅಲ್ಲಿ 4098 ಮಂದಿ ಸಾವಿಗೀಡಾಗಿದ್ದು, 5 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬಂದಿ ಸೋಂಕು ಪೀಡಿತರಾಗಿದ್ದಾರೆ ಎಂದು ಕೋವಿಡ್‌ ದತ್ತಾಂಶಗಳ ನಿರ್ವಹಣೆ ಮಾಡುತ್ತಿರುವ ಜಾನ್ಸ್‌ ಹಾಪಿRನ್ಸ್‌ ವಿಶ್ವವಿದ್ಯಾಲಯದ ಅಂಕಿ ಅಂಶಗಳನ್ನುದ್ದೇಶಿಸಿ ಜಿಯೋ ಟೀವಿ ವರದಿ ಮಾಡಿದೆ.

Advertisement

ಕಳೆದ ಕೆಲವು ವಾರಗಳಿಂದ ಪ್ರಕರಣಗಳ ಪತ್ತೆ ಪ್ರಮಾಣ ದುಪ್ಪಟ್ಟಿಗೂ ಹೆಚ್ಚು ಆಗುತ್ತಿದೆ. ಪಾಕ್‌ ಸರಕಾರ ಲಾಕ್‌ಡೌನ್‌ ಸಡಿಲಿಕೆ ಬಳಿಕ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎನ್ನುವುದು ಅಲ್ಲಿನ ವೈದ್ಯಕೀಯ ಪರಿಣತರ ಹೇಳಿಕೆಯಾಗಿದೆ.

ಎ.23ರಂದು ವಿಶ್ವ ಆರೋಗ್ಯ ಸಂಸ್ಥೆ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದು, ಲಾಕ್‌ಡೌನ್‌ ಸಡಿಲಿಸದಂತೆ ಹೇಳಿತ್ತು.
ಯಾವುದೇ ಸೂಕ್ತ ಕ್ರಮಗಳಿಲ್ಲದ ಹೊರತು ಲಾಕ್‌ಡೌನ್‌ ಸಡಿಲಿಕೆ ಒಳ್ಳೆಯದಲ್ಲ. ಜುಲೈ ಮಧ್ಯಭಾಗದ ವೇಳೆಗೆ ಇಲ್ಲಿ 2 ಲಕ್ಷಕ್ಕೂ ಮೀರಿ ಪ್ರಕರಣಗಳು ಇರಲಿವೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಾನಿಯಾದರೂ, ಹೆಚ್ಚಿನ ಸಂಖ್ಯೆಯಲ್ಲಿ ಬಡವರೇ ಇರುವುದರಿಂದ ಕೋವಿಡ್‌ ಪ್ರಕರಣಗಳು ದುಪ್ಪಟ್ಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಡಾ| ಟೆರ್ದೋಸ್‌ ಅಧ್‌ನಾಮ್‌ ಹೇಳಿದ್ದರು.

ಆದರೆ ಲಾಕ್‌ಡೌನ್‌ನಿಂದಾಗುವ ಹಾನಿಯನ್ನು ತುಂಬಲು ಸಾಧ್ಯವಿಲ್ಲ. ಕೋವಿಡ್‌ ಪರಿಣಾಮಕಾರಿ ನಿಯಂತ್ರಣಕ್ಕೆ ವಿಶ್ವದಲ್ಲೇ ಅತ್ಯುತ್ತಮ ಕ್ರಮಗಳನ್ನು ನಮ್ಮ ಸರಕಾರ ಕೈಗೊಂಡಿತ್ತು ಎಂದು ಪಾಕ್‌ ಪ್ರಧಾನಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next