ಇಸ್ಲಾಮಾಬಾದ್: ಕೇಬಲ್ ತುಂಡಾಗಿ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕೇಬಲ್ ಕಾರ್ ನಲ್ಲಿ ಸಿಲುಕಿದ್ದ ಸುಮಾರು ಎಂಟು ಮಂದಿಯನ್ನು ಸತತ ಹದಿನೈದು ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಿಗ್ಗೆ ಅಲ್ಲೈ ಜಿಲ್ಲೆಯ ಅಲ್ಲೈ ತೆಹಸಿಲ್‌ನಲ್ಲಿ ಆರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಸುಮಾರು 900 ಅಡಿ ಎತ್ತರದಲ್ಲಿ ಕೇಬಲ್ ಕಾರ್ ನ ತಂತಿ ತುಂಡಾಗಿ ಅಪಾಯದಲ್ಲಿ ಸಿಲುಕಿದ್ದರು.
ಕಣಿವೆ ಪ್ರದೇಶವಾಗಿದ್ದರಿಂದ ಇಲ್ಲಿನ ಜನ ಸಂಚಾರಕ್ಕೆ ಕೇಬಲ್ ಕಾರನ್ನೇ ಬಳಸುತ್ತಿದ್ದರು ಹಾಗೆಯೆ ಮಂಗಳವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದ ಆರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಕೇಬಲ್ ಕಾರ್ ನಲ್ಲಿ ಹೋಗುತ್ತಿದ್ದ ವೇಳೆ ಕಣಿವೆ ಮಧ್ಯದಲ್ಲಿ ಸುಮಾರು 900 ಅಡಿ ಎತ್ತರದಲ್ಲಿ ಹೋಗುತ್ತಿದ್ದ ವೇಳೆ ತಂತಿ ತುಂಡಾಡಿ ಕೇಬಲ್ ಕಾರ್ ಸಿಲುಕಿಕೊಂಡಿತ್ತು ಇದನ್ನು ಗಮನಿಸಿದ ಇತರ ಕೇಬಲ್ ಕಾರ್ ನಲ್ಲಿ ಚಲಿಸುತ್ತಿದ್ದ ಮಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ ಖೈಬರ್ ಪಖ್ತುಂಖ್ವಾ (ಕೆಪಿ) ಸಿಎಂ ಅಜಂ ಖಾನ್ ಘಟನೆಯ ಬಗ್ಗೆ ಗಮನ ಸೆಳೆದಿದ್ದು ಕೇಬಲ್ ಕಾರಿನಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಹೆಲಿಕಾಪ್ಟರ್ ಅನ್ನು ಬಳಸುವಂತೆ ಆದೇಶ ನೀಡಿದ್ದರು ಆ ಬಳಿಕ ಕಾರ್ಯಾಚರಣೆ ಆರಂಭಗೊಂಡು ಬರೋಬ್ಬರಿ ಹದಿನೈದು ಗಂಟೆಗಳ ಕಾರ್ಯಾಚರಣೆ ನಡೆಸಿ ಕೇಬಲ್ ಕಾರ್ ನಲ್ಲಿ ಸಿಲುಕಿದ್ದ ಎಂಟು ಮಂದಿಯನ್ನು ಪಾಕಿಸ್ತಾನದ ಸೇನಾ ಪಡೆ ರಕ್ಷಣೆ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತ್ಯಂತ ಕಷ್ಟಕರವಾದ ಮತ್ತು ಸಂಕೀರ್ಣವಾದ ಕಾರ್ಯಾಚರಣೆಯನ್ನು ಪಾಕಿಸ್ತಾನ ಸೇನೆಯು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Zimbabwe Cricket Legend: ಜಿಂಬಾಬ್ವೆಯ ಮಾಜಿ ಕ್ರಿಕೆಟ್ ದಿಗ್ಗಜ ಹೀತ್ ಸ್ಟ್ರೀಕ್ ನಿಧನ