Advertisement

ಬಾಲಾಕೋಟ್‌ ಮದ್ರಸಾ ಬಳಿ ತೆರಳಲು ಬಿಡದ ಪಾಕ್‌

12:30 AM Mar 09, 2019 | Team Udayavani |

ಹೊಸದಲ್ಲಿ/ಇಸ್ಲಾಮಾಬಾದ್‌: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ಥಾನದ ಬಾಲಾಕೋಟ್‌ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿ ಕುರಿತು ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಿರುವ ಪಾಕಿಸ್ಥಾನದ ಮತ್ತೂಂದು ಮುಖ ಬಹಿರಂಗವಾಗಿದೆ. ಭಾರತದ ದಾಳಿಯಿಂದ ಬಾಲಾಕೋಟ್‌ನಲ್ಲಿ ಯಾವುದೇ ಹಾನಿ ಆಗಿಲ್ಲ ಎಂದು ಹೇಳುತ್ತಾ ಬಂದಿರುವ ಪಾಕಿಸ್ಥಾನ, ಈಗ ಅಂತಾರಾಷ್ಟ್ರೀಯ ಮಾಧ್ಯಮವೊಂದರ ವರದಿಗಾರರಿಗೆ ಆ ಸ್ಥಳಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದೆ.

Advertisement

ಪಾಕಿಸ್ಥಾನದ ಈಶಾನ್ಯ ಭಾಗದಲ್ಲಿರುವ ಬಾಲಾಕೋಟ್‌ನ ಮದರಸಾ ಹಾಗೂ ಇತರೆ ಕಟ್ಟಡಗಳಿರುವ ಸ್ಥಳಕ್ಕೆ ತೆರಳಲು ರಾಯಿಟರ್ಸ್‌ ವರದಿಗಾರರು ಯತ್ನಿಸಿದ್ದು, ಅವರನ್ನು ಪಾಕಿಸ್ಥಾನದ ಭದ್ರತಾ ಅಧಿಕಾರಿಗಳು ತಡೆದಿದ್ದಾರೆ. ಕಳೆದ 9 ದಿನಗಳಲ್ಲಿ ಮೂರನೇ ಬಾರಿಗೆ ರಾಯಿಟರ್ಸ್‌ ತಂಡ ಇಲ್ಲಿಗೆ ಭೇಟಿ ನೀಡಲು ಯತ್ನಿಸಿ ವಿಫ‌ಲವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಭದ್ರತೆಯ ನೆಪವೊಡ್ಡಿ ಇವರನ್ನು ಮುಂದೆ ಸಾಗದಂತೆ ತಡೆಯಲಾಗಿದೆ. ಆದರೆ, ರಾಯಿಟರ್ಸ್‌ ತಂಡಕ್ಕೆ ಸುಮಾರು 100 ಮೀಟರ್‌ ದೂರದಿಂದ ಮದರಸಾದ ಹಿಂಭಾಗ ಕಾಣಿಸಿದೆ. ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಅಲ್ಲಿ ಮೊದಲು ಮದ್ರಸಾವಿತ್ತು. ಕಳೆದ ಜೂನ್‌ನಲ್ಲಿ ಮುಚ್ಚಲಾ ಯಿತು ಎಂದಿದ್ದಾರೆ ಎಂದು ವರದಿಗಾರರು ಹೇಳಿದ್ದಾರೆ.

ಎಫ್ಐಆರ್‌ ದಾಖಲು: ಏತನ್ಮಧ್ಯೆ, ಬಾಲಾಕೋಟ್‌ನಲ್ಲಿ 19 ಮರಗಳನ್ನು ನಾಶ ಮಾಡಿದ ಆರೋಪದಲ್ಲಿ ಭಾರತೀಯ ವಾಯುಪಡೆಯ ಅಪರಿಚಿತ ಪೈಲಟ್‌ಗಳ ವಿರುದ್ಧ ಪಾಕಿಸ್ಥಾನದಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. 

ಸಯೀದ್‌ ಭಾಷಣಕ್ಕೆ ನಿರ್ಬಂಧ: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ಮುಂಬೈ ದಾಳಿ ಸಂಚುಕೋರ ಉಗ್ರ ಹಫೀಜ್‌ ಸಯೀದ್‌ ಸೇರಿದಂತೆ ಇತರ ಉಗ್ರರು ಮತ್ತು ಉಗ್ರ ಸಂಘಟನೆಗಳ ಮೇಲೆ ಕ್ರಮ ಕೈಗೊಂಡಿದ್ದಲ್ಲದೆ, ಶುಕ್ರವಾರ ಮಸೀದಿಯಲ್ಲಿ ಸಯೀದ್‌ ಮಾಡುತ್ತಿದ್ದ ಭಾಷಣಕ್ಕೆ ನಿರ್ಬಂಧ ವಿಧಿಸಿದೆ . ಸರಕಾರ ನೇಮಿಸಿದ ಮೌಲ್ವಿ ನೇತೃತ್ವದಲ್ಲಿ ಈ ಮಸೀದಿಯಲ್ಲಿ  ಪ್ರಾರ್ಥನೆ ಮತ್ತು ಬೋಧನೆ ಮಾಡಲಾಗು ತ್ತದೆ. ಜಾಮಿಯಾ ಮಸ್ಜಿದ್‌ ಅಲ್‌ ಖದೀಸಾದಲ್ಲಿ ಪ್ರತಿ ಶುಕ್ರವಾರ ಪ್ರಾರ್ಥನೆ ನಡೆಸುತ್ತಿದ್ದ ಸಯೀದ್‌, ನಂತರ ಭಾಷಣ ಮಾಡುತ್ತಿದ್ದ. ಇದೇ ಮೊದಲ ಬಾರಿಗೆ ಈಗ ಪಂಜಾಬ್‌ ಸರಕಾರ ಕಡಿವಾಣ ಹಾಕಿದೆ. 

ನಿಖರ ಗುಪ್ತಚರ ಮಾಹಿತಿ ಆಧರಿಸಿಯೇ ಉಗ್ರರ ಶಿಬಿರಗಳ ಮೇಲೆ ವಾಯುಪಡೆ ದಾಳಿ ನಡೆಸಿದೆ. ನಮ್ಮ ಪೈಲಟ್‌ಗಳು ಮಜಾ ಮಾಡುವ ಉದ್ದೇಶದಿಂದಾಗಲೀ, ಅಲ್ಲಿ ಗುಲಾಬಿ ದಳಗಳನ್ನು ಸುರಿಯುವುದಕ್ಕಾಗಲೀ ಹೋಗಿದ್ದಲ್ಲ. ಉಗ್ರವಾದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಪಾಕ್‌ಗೆ ತಿಳಿಸಲು ತೆರಳಿದ್ದು.
 ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

Advertisement

ಅಭಿಗೆ ಪರಮವೀರ ಚಕ್ರ: ಪಳನಿ ಆಗ್ರಹ 
ಪಾಕಿಸ್ಥಾನದ ಎಫ್16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ, ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ದೇಶದ ಅತ್ಯುನ್ನತ ಸೇನಾ ಗೌರವ ವಾದ ಪರಮವೀರ ಚಕ್ರ ನೀಡಿ ಗೌರವಿಸಬೇಕು ಎಂದು ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ ಮಾಡಿ ದ್ದಾರೆ. ಪ್ರಧಾನಿ ಮೋದಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಪ್ರತಿಕೂಲ ಪರಿಸ್ಥಿತಿಯಲ್ಲೂ ಅಭಿನಂದನ್‌ ತಮ್ಮ ದಿಟ್ಟತನವನ್ನು ಮೆರೆದಿದ್ದಾರೆ. ಹೀಗಾಗಿ, ಅವರಿಗೆ ಈ ಗೌರವ ಸಲ್ಲಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next