ಕರಾಚಿ: ಕಳೆದ ಶುಕ್ರವಾರ ಪಾಕಿಸ್ತಾನದ ಬಲೂಚಿಸ್ಥಾನದಲ್ಲಿ ನಡೆದ ಎರಡು ಬಾಂಬ್ ದಾಳಿಗಳಲ್ಲಿ ಭಾರತದ ಗುಪ್ತಚರ ಸಂಸ್ಥೆ ಭಾಗಿಯಾಗಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ. ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.
ಬಲೂಚಿಸ್ಥಾನದ ಮಸ್ತುಂಗ್ ಜಿಲ್ಲೆಯ ಮಸೀದಿ ಬಳಿ ಬಾಂಬ್ ಸ್ಫೋಟ ನಡೆದಿತ್ತು. ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದಂದು ಮೆರವಣಿಗೆಗಾಗಿ ಜನರು ಸೇರುತ್ತಿದ್ದಾಗ ಪೊಲೀಸ್ ವಾಹನದ ಬಳಿ ಬಾಂಬರ್ ತನ್ನ ಸ್ಫೋಟಕಗಳನ್ನು ಸ್ಫೋಟಿಸಿದನು. ಕೆಲ ಸಮಯದ ಬಳಿಕ ಹಂಗು ನಗರದ ಖೈಬರ್ ಫಖ್ತುಂಖ್ವದ ಮಸೀದಿ ಬಳಿ ನಡೆದ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದರು.
ಬಲೂಚಿಸ್ಥಾನದ ರಾಜಧಾನಿ ಕ್ವೆಟ್ಟಾದಲ್ಲಿ ಮಾತನಾಡಿದ ಪಾಕ್ ಆಂತರಿಕ ಸಚಿವ ಸರ್ಫರಾಜ್ ಭುಗ್ತಿ, ಈ ಆತ್ಮಾಹುತಿ ದಾಳಿಯಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ‘ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ODI World Cup 2023: ಅಭ್ಯಾಸ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಸ್ಟಾರ್ಕ್; ವಿಡಿಯೋ ನೋಡಿ
“ನಾಗರಿಕ, ಮಿಲಿಟರಿ ಮತ್ತು ಇತರ ಎಲ್ಲಾ ಸಂಸ್ಥೆಗಳು ಮಸ್ತುಂಗ್ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾಗಿಯಾದ ಅಂಶಗಳ ವಿರುದ್ಧ ಜಂಟಿಯಾಗಿ ಮುಷ್ಕರ ನಡೆಸಲಿವೆ. ಆತ್ಮಾಹುತಿ ದಾಳಿಯಲ್ಲಿ RAW ಭಾಗಿಯಾಗಿದೆ” ಎಂದು ಪಾಕಿಸ್ತಾನದ ಸಚಿವರು ಹೇಳಿದ್ದಾರೆ.
ಮುಸ್ತಾಂಗ್ ನ ಮದೀನಾ ಮಸೀದಿ ಬಳಿ ನಡೆದ ಸ್ಫೋಟದಲ್ಲಿ 60 ಮಂದಿ ಮೃತಪಟ್ಟು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.