Advertisement

Pakistan; ಬ್ಯಾಟ್ ನಲ್ಲಿ ಪಾಲಿಸ್ತಿನ್ ಧ್ವಜದ ಸ್ಟಿಕ್ಕರ್ ಹಾಕಿದ ಪಾಕ್ ಬ್ಯಾಟರ್ ಗೆ ದಂಡ

01:25 PM Nov 27, 2023 | Team Udayavani |

ಕರಾಚಿ: ತನ್ನ ಬ್ಯಾಟ್ ನಲ್ಲಿ ಪಾಲಿಸ್ತೇನ್ ನ ಧ್ವಜದ ಸ್ಟಿಕ್ಕರ್ ಪ್ರದರ್ಶಿಸಿದ ಕಾರಣದಿಂದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಗೆ ದಂಡ ವಿಧಿಸಲಾಗಿದೆ. ಪಾಕಿಸ್ತಾನದ ದೇಶೀಯ ಟಿ20 ಕಪ್ ನಲ್ಲಿ ಬ್ಯಾಟರ್ ಅಜಮ್ ಖಾನ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

Advertisement

ಪಾಕಿಸ್ತಾನದ ಜಿಯೋ ನ್ಯೂಸ್‌ನ ವರದಿಯ ಪ್ರಕಾರ, ಅಜಮ್ ತನ್ನ ಬ್ಯಾಟ್‌ ನಲ್ಲಿ ಪ್ಯಾಲಿಸ್ತೀನ್ ಧ್ವಜವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ತನ್ನ ಎಲ್ಲಾ ಬ್ಯಾಟ್‌ ಗಳು ಒಂದೇ ರೀತಿಯ ಸ್ಟಿಕ್ಕರ್‌ ಗಳನ್ನು ಹೊಂದಿವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

“ಬ್ಯಾಟರ್‌ಗೆ ಅವರ ಪಂದ್ಯದ ಶುಲ್ಕದ 50% ದಂಡ ವಿಧಿಸಲಾಯಿತು. ಬ್ಯಾಟರ್‌ ಗೆ ಈ ಹಿಂದೆ ರೆಫ್ರಿಯು ಬ್ಯಾಟ್‌ ನಲ್ಲಿ ಸ್ಟಿಕ್ಕರ್ ಪ್ರದರ್ಶಿಸದಂತೆ ಎಚ್ಚರಿಕೆ ನೀಡಿದ್ದರು, ಯಾಕೆಂದರೆ ಇದು ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ (ಪಿಸಿಬಿ) ಇದಕ್ಕೆ ಸಹಿ ಮಾಡಿದೆ” ಎಂದು ವರದಿಯಾಗಿದೆ.

ಭಾನುವಾರ ಕರಾಚಿ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಕರಾಚಿ ವೈಟ್ಸ್ ಮತ್ತು ಲಾಹೋರ್ ಬ್ಲೂಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಅಜಮ್ ಖಾನ್ ಕರಾಚಿ ವೈಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಅಜಮ್ ಅದೇ ಸ್ಟಿಕ್ಕರ್ ಹೊಂದಿದ್ದ ಬ್ಯಾಟ್ ಬಳಸಿದ್ದರು, ಆದರೆ ಭಾನುವಾರದ ಪಂದ್ಯಕ್ಕೆ ಮುಂಚಿತವಾಗಿ ಅಧಿಕಾರಿಗಳು ಮಾಹಿತಿ ಅಥವಾ ಎಚ್ಚರಿಕೆ ನೀಡಲಿಲ್ಲ ಎಂದು ವರದಿ ಹೇಳಿದೆ.

Advertisement

ಐಸಿಸಿಯ ವಸ್ತ್ರ ಮತ್ತು ಸಲಕರಣೆಗಳ ನಿಯಂತ್ರಣ ನಿಯಮದ ಪ್ರಕಾರ, “ರಾಜಕೀಯ, ಧಾರ್ಮಿಕ, ಅಥವಾ ಜನಾಂಗೀಯ ಚಟುವಟಿಕೆಗಳನ್ನು ಹೊಂದಿರುವ ಸಂದೇಶಗಳನ್ನು ಪ್ರದರ್ಶಿಸಲು ಆಟಗಾರರಿಗೆ ಅನುಮತಿಸಲಾಗುವುದಿಲ್ಲ.”

ಕಳೆದ ಏಕದಿನ ವಿಶ್ವಕಪ್ ವೇಳೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ತನ್ನ ಶತಕವನ್ನು ಗಾಜಾದ ಜನರಿಗೆ ಅರ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next