Advertisement

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ!

03:28 PM Sep 23, 2020 | Nagendra Trasi |

ಇಸ್ಲಾಮಾಬಾದ್: ವಿವಿಧ ವಿರೋಧ ಪಕ್ಷಗಳ ಪ್ರಮುಖ ನಾಯಕರು ಸಮಾವೇಶ ನಡೆಸುವ ಮುನ್ನ ಪಾಕಿಸ್ತಾನ ಸೇನಾ ವರಿಷ್ಠ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ ಮತ್ತು ಐಎಸ್ ಐ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಝ್ ಹಮೀದ್ ರಹಸ್ಯವಾಗಿ ಮುಖಂಡರ ಜತೆ ಮಾತುಕತೆ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಪ್ರಧಾನಿ ಇಮ್ರಾನ್ ಖಾನ್ ಜತೆಗಿನ ರಾಜಕೀಯ ಭಿನ್ನಾಭಿಪ್ರಾಯದ ಕುರಿತು ಪ್ರಸ್ತಾಪಿಸುವಾಗ ಮಿಲಿಟರಿಯ ಹೆಸರನ್ನು ಎಳೆದು ತರಬಾರದು ಎಂದು ರಹಸ್ಯ ಮಾತುಕತೆಯ ವೇಳೆ ವಿರೋಧ ಪಕ್ಷಗಳ ನಾಯಕರಲ್ಲಿ ಇಬ್ಬರು ಅಧಿಕಾರಿಗಳು ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ದ ಡಾನ್ ವರದಿ ಪ್ರಕಾರ, ವಿರೋಧ ಪಕ್ಷದ ನಾಯಕ ಶಹಬಾಝ್ ಶರೀಫ್, ಪಾಕಿಸ್ತಾನ್ ಪೀಪಲ್ಸ್ ಪಕ್ಷ(ಪಿಪಿಪಿ)ದ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸೇರಿದಂತೆ 15 ಮಂದಿ ರಾಜಕೀಯ ಮುಖಂಡರ ಜತೆ ಬಾಜ್ವಾ ಮತ್ತು ಹಮೀದ್ ಸೆಪ್ಟೆಂಬರ್ 15ರಂದು ಮಾತುಕತೆ ನಡೆಸಿರುವುದಾಗಿ ಹೇಳಿದೆ.

ಬಿಗಿ ಭದ್ರತೆಯೊಂದಿಗೆ ರಹಸ್ಯವಾಗಿ ನಡೆದಿದ್ದ ಈ ಮಾತುಕತೆಯ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ. ರೈಲ್ವೆ ಸಚಿವ ಶೇಖ್ ರಶೀದ್ ಸಭೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ತಾನೂ ಕೂಡಾ ಭಾಗವಹಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲೇ 37 ಬಾಲ್ಯವಿವಾಹಕ್ಕೆ ತಯಾರಿ ! ಸಂಬಂಧಿಕರಲ್ಲಿಯೇ ಹೆಚ್ಚು ನಡೆಯುತ್ತಿವೆ

Advertisement

ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಸಾಂವಿಧಾನಿಕ ಹಕ್ಕನ್ನು ಬದಲಾಯಿಸುತ್ತಿರುವುದಕ್ಕೆ ಭಾರತ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಚರ್ಚೆ ನಡೆಸಲಾಗಿದೆ ಎಂದು ಶೇಕ್ ರಶೀದ್ ಹೇಳಿದ್ದಾರೆ.

ವಿವಿಧ ಪಕ್ಷಗಳ ಸಮಾವೇಶದ ಹಿನ್ನೆಲೆಯಲ್ಲಿ ಪ್ರಮುಖ ವಿರೋಧ ಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್ ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿವೆ. ಅಲ್ಲದೇ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿರುವುದಾಗಿ ವರದಿ ತಿಳಿಸಿದೆ.

ರಾಜಕೀಯ ವಿಚಾರದಲ್ಲಿ ಮೂಗು ತೂರಿಸಲ್ಲ:

ಪಾಕಿಸ್ತಾನದ ಸೇನೆ ಯಾವುದೇ ನಿಟ್ಟಿನಲ್ಲಿಯೂ ರಾಜಕೀಯ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಜನರಲ್ ಬಾಜ್ವಾ ವಿರೋಧ ಪಕ್ಷಗಳ ನಾಯರಿಗೆ ಮಾತುಕತೆ ವೇಳೆ ಭರವಸೆ ನೀಡಿದ್ದರು. ಅಲ್ಲದೇ ಚುನಾವಣೆ ಸುಧಾರಣೆ ಮತ್ತು ಹೊಣೆಗಾರಿಕೆ ವಿಚಾರದಲ್ಲಿ ಸೇನೆ ಶಾಮೀಲಾಗಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: ಅದೃಷ್ಟವಂತ: ಧೋನಿ ಹೊಡೆದ ಅದ್ಭುತ ಸಿಕ್ಸ್ ಈ ಅಭಿಮಾನಿಗೆ ಮರೆಯಲಾಗದ ಕ್ಷಣವಾಯಿತು !

ಸಾಂವಿಧಾನಿಕವಾಗಿ ಆಯ್ಕೆಯಾದ ನಾಗರಿಕ ಸರ್ಕಾರಕ್ಕೆ ಸೇನೆ ಬೆಂಬಲ ನೀಡುವುದು ಮಾತ್ರ ಕೆಲಸವಾಗಿದೆ. ಇದು ಯಾರೇ ಅಧಿಕಾರದಲ್ಲಿರಲಿ ನಿರಂತರವಾಗಿ ಮುಂದುವರಿಯುತ್ತಿದೆ. ಅಷ್ಟೇ ಅಲ್ಲ ಯಾರೊಬ್ಬರಿಗೂ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next