Advertisement

ವೀರಯೋಧನ ಸ್ವಾಗತಕ್ಕೆ ಸಜ್ಜಾದ ಭಾರತ

12:30 AM Mar 01, 2019 | Team Udayavani |

ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ರನ್ನು ವಶಕ್ಕೆ ಪಡೆಯುವ ಮೂಲಕ ಭಾರತವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಅಂದುಕೊಂಡಿದ್ದ ಪಾಕಿಸ್ಥಾನ ಕೊನೆಗೂ ಮಂಡಿಯೂರಿದೆ. ಅಭಿನಂದನ್‌ರನ್ನು ಬೇಷರತ್ತಾಗಿ ತತ್‌ಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಈ ವಿಚಾರದಲ್ಲಿ ಯಾವುದೇ ಡೀಲ್‌ಗ‌ೂ ನಾವು ಸಿದ್ಧರಿಲ್ಲ ಎಂಬ ಸ್ಪಷ್ಟ ಹಾಗೂ ಖಡಕ್‌ ಸಂದೇಶ ಭಾರತದ ಕಡೆಯಿಂದ ರವಾನೆಯಾಗುತ್ತಲೇ, ತಣ್ಣಗಾದ ಪಾಕಿಸ್ಥಾನ, ಅಚ್ಚರಿಯೆಂಬಂತೆ ಏಕಾಏಕಿ ಅಭಿನಂದನ್‌ ಅವರ ಬಿಡುಗಡೆಗೆ ಸಮ್ಮತಿಸಿದೆ. ಅವರ ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದ ಭಾರತೀಯರು ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಪಾಕಿಸ್ಥಾನದ ಸಂಸತ್‌ನ ಜಂಟಿ ಅಧಿವೇಶನದಲ್ಲಿ ಗುರುವಾರ ಈ ಕುರಿತು ಮಾತನಾಡಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, “ಅಭಿನಂದನ್‌ರನ್ನು ಶುಕ್ರವಾರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಘೋಷಿಸಿದರು. “ನಾವು ಶಾಂತಿಯನ್ನು ಬಯಸುವವರು. ಹಾಗಾಗಿ, ಮುಕ್ತ ಮಾತುಕತೆಯ ಮೊದಲ ಹೆಜ್ಜೆಯಾಗಿ ನಾವು ನಾಳೆ (ಶುಕ್ರವಾರ) ನಮ್ಮ ವಶದಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಅವರು ಪ್ರಕಟಿಸಿದರು.

ಅದಕ್ಕೂ ಮೊದಲು ಅಲ್ಲಿನ ವಿದೇಶಾಂಗ ಸಚಿವ ಮೆಹೂ¾ದ್‌ ಖುರೇಷಿ, ಶಾಂತಿಯ ಪ್ರಸ್ತಾಪ ಮಾಡಿ, ನಾವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಲ್ಲೂ ದೂರವಾಣಿ ಮೂಲಕ ಶಾಂತಿ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದರು. ಆದರೆ, ಪಾಕ್‌ ಜತೆಗೆ ಮಾತುಕತೆಗೆ ಸಿದ್ಧವಿಲ್ಲ ಎಂಬುದನ್ನು ಭಾರತ ಸ್ಪಷ್ಟವಾಗಿ ತಿಳಿಸಿತ್ತು. ಮೊದಲ ಪಾಕಿಸ್ಥಾನವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿ. ಅದನ್ನು ಬಿಟ್ಟು, ಅಭಿನಂದನ್‌ರನ್ನು ದಾಳವಾಗಿಟ್ಟುಕೊಂಡು, ನಮ್ಮೊಂದಿಗೆ ಆಟವಾಡುವುದು ಬೇಡ. ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಲೇಬೇಕು ಎಂದು ಒತ್ತಡ ತರುವ ರೀತಿ ಮಾತನಾಡಿತ್ತು. ಭಾರತದ ಬಿಗಿ ಪಟ್ಟು ಹಾಗೂ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಲೇ ಪಾಕಿಸ್ಥಾನಕ್ಕೆ ದಾರಿ ಕಾಣದಂತಾಯಿತು. ಪರಿಣಾಮ, ಅಭಿನಂದನ್‌ರ ಬಿಡುಗಡೆಯ ಹಾದಿ ಸುಗಮವಾಯಿತು.
ವಿಶ್ವ ನಾಯಕರ ಮಧ್ಯಪ್ರವೇಶ?: ಭಾರತ-ಪಾಕಿಸ್ಥಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಕುರಿತು ಚರ್ಚೆ ತೀವ್ರಗೊಂಡಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಭಾರತ-ಪಾಕಿಸ್ಥಾನದಿಂದ ಸದ್ಯದಲ್ಲೇ ಸಿಹಿ ಸುದ್ದಿ ಕೇಳುವ ನಿರೀಕ್ಷೆಯಿದೆ. ಪ್ರಕ್ಷುಬ್ಧ ವಾತಾವರಣವು ತಿಳಿಗೊಳ್ಳುತ್ತದೆಂಬ ಭರವಸೆಯಿದೆ ಎಂದು ಹೇಳಿದರು. ಇನ್ನೊಂದೆಡೆ, ಅಮೆರಿಕ ವಿದೇಶಾಂಗ ಸಚಿವ ಪೊಂಪೊÂà ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರೊಂದಿಗೆ ಮಾತುಕತೆ ನಡೆಸಿದರು. ದಿಲ್ಲಿಯಲ್ಲಿ ಸೌದಿ ಅರೇಬಿಯಾದ ರಾಯಭಾರಿ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ, ಅಭಿನಂದನ್‌ರ ಬಿಡುಗಡೆಗೆ ಸಂಬಂಧಿಸಿ ಮಾತುಕತೆ ನಡೆಸಿದರು. ಇನ್ನೊಂದೆಡೆ, ಅತ್ತ ಪಾಕಿಸ್ಥಾನದಲ್ಲೂ ವಿದೇಶಾಂಗ ಸಚಿವ ಖುರೇಷಿ ಅವರು ಚೀನ ವಿದೇಶಾಂಗ ಸಚಿವರಿಗೆ ತುರ್ತು ಕರೆ ಮಾಡಿ ಮಾತುಕತೆ ನಡೆಸಿದರು.  ಎರಡೂ ದೇಶಗಳು ಸಹನೆ ಕಾಯ್ದುಕೊಳ್ಳಬೇಕು. ಭಾರತ- ಪಾಕಿಸ್ಥಾನದ ನಡುವಿನ ವಿದ್ಯಮಾನಗಳನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಚೀನ ಹೇಳಿತು.

ದೇಶಾದ್ಯಂತ ಸಿಹಿ ಹಂಚಿ ಸಂಭ್ರಮ
ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ಪಾಕಿಸ್ಥಾನ ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಲೇ ಆಘಾತಗೊಂಡಿದ್ದ ದೇಶದ ಜನತೆ, ಗುರುವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಅಭಿನಂದನ್‌ರನ್ನು ಬಿಡುಗಡೆ ಮಾಡುವ ಘೋಷಣೆ ಹೊರಬೀಳುತ್ತಿದ್ದಂತೆ, ದೇಶಾದ್ಯಂತ ಸಂಭ್ರಮ ಮನೆ ಮಾಡಿತು. ಅನೇಕ ಪ್ರದೇಶಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು, ಸಂಘ-ಸಂಸ್ಥೆಗಳು ಸಿಹಿ ಹಂಚಿ ಸಂಭ್ರಮಿಸಿದರು. ಬುಧವಾರದಿಂದೀಚೆಗೆ ಅಭಿನಂದನ್‌ರ ಬಿಡುಗಡೆಗಾಗಿ ಹಲವೆಡೆ ಹೋಮ-ಹವನ, ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗಿತ್ತು. ಪಾಪಿಗಳ ಕಪಿಮುಷ್ಟಿಯಿಂದ ಮುಕ್ತರಾಗಿ ನಮ್ಮ ವೀರ ಯೋಧ ಸುರಕ್ಷಿತವಾಗಿ ವಾಪಸ್‌ ಬಂದರೆ ಸಾಕು ಎಂಬ ಮಾತುಗಳೇ ಎಲ್ಲರ ಬಾಯಿಯಿಂದಲೂ ಕೇಳಿಬರುತ್ತಿತ್ತು.

ವಾಘಾ ಗಡಿಯಲ್ಲಿ ಹಸ್ತಾಂತರ
ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ಬುಧವಾರ ರಾವಲ್ಪಿಂಡಿಗೆ ಕರೆದೊಯ್ಯಲಾಗಿದ್ದು, ಗುರುವಾರ ಅಲ್ಲಿಂದ ಬಿಗಿಭದ್ರತೆಯೊಂದಿಗೆ ಅವರನ್ನು ವಿಶೇಷ ವಿಮಾನದಲ್ಲಿ ಲಾಹೋರ್‌ಗೆ ಕರೆತರಲಾಗುತ್ತದೆ. ನಂತರ ವಾಘಾ ಗಡಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾ ಗುತ್ತದೆ. ಅವರು ಆರೋಗ್ಯವಾಗಿದ್ದಾರೆ ಎಂದು ಪಾಕಿಸ್ಥಾನ ತಿಳಿಸಿದೆ. ಇನ್ನೊಂದೆಡೆ, ಅಭಿನಂದನ್‌ ಬಿಡುಗಡೆ ವಿಚಾರವನ್ನು ಬಿಜೆಪಿ, ಕಾಂಗ್ರೆಸ್‌, ಟಿಎಂಸಿ, ಆಪ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಸ್ವಾಗತಿಸಿದ್ದು, ಅಮೃತಸರದಲ್ಲಿ ವೀರ ಯೋಧನನ್ನು ಸ್ವಾಗತಿಸಲು ಸಿದ್ಧತೆ ಶುರುವಾಗಿದೆ. ಪಂಜಾಬ್‌ ಸಿಎಂ ಕ್ಯಾ.ಅಮರೀಂದರ್‌ ಸಿಂಗ್‌ ಅವರೇ ಸ್ವತಃ ತೆರಳಿ ಅಭಿನಂದನ್‌ರನ್ನು ಸ್ವಾಗತಿಸಲಿದ್ದಾರೆ.

Advertisement

ಭದ್ರತೆ ವಿಚಾರಣೆಗೆ 
ನಕಲಿ ಕರೆ ಮಾಡ್ತಾರೆ ಎಚ್ಚರ!

ತಾನು ಹಿರಿಯ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ಫೋನ್‌ ಮಾಡಿ ಸದ್ಯದ ಭದ್ರತಾ ಸ್ಥಿತಿಗತಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕೆಳ ಹಂತದ ಅಧಿಕಾರಿಗಳು, ಪಂಚಾಯಿತಿ ಹಾಗೂ ಇತರ ಅಧಿಕಾರಿಗಳಿಗೆ ಈ ಕರೆಗಳು ಬರುತ್ತಿವೆ. ಹೀಗಾಗಿ ಇಂತಹ ಕರೆಗಳಿಗೆ ಪ್ರತಿಕ್ರಿಯೆ ನೀಡದಂತೆ ಜಮ್ಮು ಕಾಶ್ಮೀರ ಪೊಲೀಸರು ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲ ಪೊಲೀಸ್‌ ಅಧಿಕಾರಿಗಳು, ರಾಜ್ಯದ ಆಡಳಿತ ವರ್ಗಕ್ಕೂ ಈ ಸೂಚನೆ ನೀಡಲಾಗಿದೆ. ಸೇನೆ ನೀಡಿದ ಸೂಚನೆ ಮೇರೆಗೆ ಈ ಸಲಹೆ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅದರಲ್ಲೂ ವಿಶೇಷವಾಗಿ ಶಸ್ತ್ರಾಸ್ತ್ರಗಳ ಸಾಗಣೆ, ಸೇನೆ ನಿಯೋಜನೆ ಸೇರಿದಂತೆ ಅತ್ಯಂತ ಸೂಕ್ಷ್ಮ ಭದ್ರತಾ ವಿವರಗಳನ್ನು ಪಾಕಿಸ್ಥಾನದ ಪಡೆ ತಿಳಿದುಕೊಳ್ಳಲು ಗಡಿ ಭಾಗದ ಅಧಿಕಾರಿಗಳಿಗೆ ಕರೆ ಬರುತ್ತಿವೆ. ಕಳೆದ 10 ದಿನಗಳಲ್ಲಿ 10 ಕ್ಕೂ ಹೆಚ್ಚು ಇಂತಹ ದೂರುಗಳು ಕೇಳಿಬಂದಿವೆ. ಅನುಮಾನಾಸ್ಪದ ಫೋನ್‌ ನಂಬರುಗಳಿಂದ ಈ ಕರೆ ಬರುತ್ತಿವೆ. ಇವುಗಳ ದೇಶದ ಹೊರಗಿನದಾಗಿರುತ್ತವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next