Advertisement

ಪಾಕಿಸ್ಥಾನದ ವಾಯುಪಡೆಗೆ ಹಿಂದೂ ಪೈಲಟ್‌ ನೇಮಕ

10:24 PM May 09, 2020 | Hari Prasad |

ಇಸ್ಲಾಮಾಬಾದ್‌: ಪಾಕಿಸ್ಥಾನದ ವಾಯುಪಡೆ (ಪಿಎಎಫ್) ಇದೇ ಮೊದಲ ಬಾರಿಗೆ ಹಿಂದೂ ಸಮುದಾಯದ ವ್ಯಕ್ತಿಯನ್ನು ಪೈಲಟ್‌ ಆಗಿ ನೇಮಿಸಲಾಗಿದೆ.

Advertisement

ರಾಹುಲ್‌ ದೇವ್‌ ಎಂಬವರು ಪಾಕಿಸ್ಥಾನ ವಾಯುಪಡೆಗೆ ಜನರಲ್‌ ಡ್ಯೂಟಿ ಪೈಲಟ್‌ ಆಫೀಸರ್‌ ಆಗಿ ನೇಮಕವಾಗಿದ್ದಾರೆ ಎಂದು ಪಾಕಿಸ್ಥಾನದ ವಾಯು ಪಡೆ ಟ್ವೀಟ್‌ ಮಾಡಿದೆ. ಆದರೆ ಅವರ ವಯಸ್ಸನ್ನು ಪಾಕಿಸ್ಥಾನ ವಾಯುಪಡೆ ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಸಾಮಾನ್ಯವಾಗಿ ಪಿ.ಎ.ಎಫ್.ಗೆ. ಉದ್ಯೋಗಕ್ಕೆ ಸೇರ್ಪಡೆಯಾಗುವ ವಯಸ್ಸು 20. ಹೀಗಾಗಿ, ರಾಹುಲ್‌ ಅದೇ ವಯೋಮಾನಕ್ಕೆ ಸೇರಿದವರು ಎನ್ನಲಾಗಿದೆ. ಅವರು ಹಿಂದೂಗಳೇ ಹೆಚ್ಚಿನ ಪ್ರಮಾಣದಲ್ಲಿರುವ ಸಿಂಧೂ ಪ್ರಾಂತ್ಯದ ಥಾರ್ಪಾಕರ್‌ ಜಿಲ್ಲೆಯವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next