Advertisement

ಮೋದಿಗೆ ಯುಎಇ ಪ್ರಶಸ್ತಿ ನೀಡಿದ್ದಕ್ಕೆ ಪಾಕಿಗಳ ಅರಚಾಟ!

11:11 AM Aug 26, 2019 | Team Udayavani |

ಇಸ್ಲಾಮಾಬಾದ್: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮದ ವಿರುದ್ಧ ಭಾರತದ ಸರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂದೂ ಇಲ್ಲದಷ್ಟು ಆಕ್ರೋಶ ಹೊರಹಾಕುತ್ತಿರುವ ಪಾಕಿಸ್ಥಾನೀಯರ ಕೋಪ ಈಗ ಯುಎಇಯತ್ತ ತಿರುಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದ್ದಕ್ಕಾಗಿ ಕೆಂಡಕಾರುತ್ತಿದ್ದಾರೆ. ಪ್ರಶಸ್ತಿ ನೀಡುತ್ತಿದ್ದಂತೆ, ಪಾಕಿಸ್ಥಾನೀಯರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೂ ಭಾನುವಾರ, ಶೇಮ್ ಆನ್ ಯುಎಇ ಹ್ಯಾಶ್‌ಟ್ಯಾಗ್ ಹಾಕಿ ಟ್ವಿಟರ್‌ ನಲ್ಲಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಜತೆಗೆ ಯುಎಇ ಪ್ರಶಸ್ತಿ ನೀಡಿದ ಅಬುಧಾಬಿ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಾಹ್ಯನ್ ಅವರನ್ನೂ ವಾಚಾಮಗೋಚರ ನಿಂದಿಸಿದ್ದಾರೆ.

ಕಾಶ್ಮೀರದಲ್ಲಿ ಮೋದಿ ಮುಸ್ಲಿಮರಿಗೆ ಇನ್ನಿಲ್ಲದ ಕಷ್ಟ ಕೊಡುತ್ತಿದ್ದರೆ ಯುಎಇ ರಾಜರು ಪ್ರಶಸ್ತಿ ನೀಡಿದ್ದು ಅಕ್ಷಮ್ಯ. ಇದು ಅವರ ನಿಜವಾದ ಮುಖವನ್ನು ತೋರಿಸುತ್ತದೆ, ಹಣ ಇದರ ಹಿಂದೆ ಕೆಲಸ ಮಾಡಿದೆ ಎಂದೆಲ್ಲ ಟೀಕಿಸಿದ್ದಾರೆ.

ಕಾಶ್ಮೀರ ವಿಚಾರವನ್ನು ಅಂ.ರಾ. ವಿಷಯವನ್ನಾಗಿಸಲು ಪಾಕಿಸ್ಥಾನ ಇನ್ನಿಲ್ಲದ ಯತ್ನ ಮಾಡುತ್ತಿದ್ದು, ಈಗಾಗಲೇ ವಿಶ್ವಸಂಸ್ಥೆಯಲ್ಲಿ ಅದರ ಪ್ರಯತ್ನ ವಿಲವಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ದಿನ ನಿತ್ಯ ಭಾರತೀಯರು, ಭಾರತವನ್ನು ಟೀಕಿಸಿ ಪಾಕಿಸ್ಥಾನ ಆಡಳಿತ, ಪಾಕಿಸ್ಥಾನೀಯರು ಟ್ವೀಟ್ ಮಾಡುತ್ತಿದ್ದಾರೆ. ಈ ಮೂಲಕ ಭಾರತವನ್ನು ಹೇಗಾದರೂ ಹಳಿಯಬೇಕೆಂಬ ಯೋಚನೆ ಅವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next