Advertisement

Viral Video: ಅರೇಬಿಕ್‌ ಬರಹದ ಉಡುಪು ಧರಿಸಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಗುಂಪು

10:53 AM Feb 26, 2024 | Team Udayavani |

ಲಾಹೋರ್: ಮಹಿಳೆಯೊಬ್ಬರು ಅರೇಬಿಕ್‌ ಬರಹದ ಉಡುಪನ್ನು ಧರಿಸಿ ಬಂದಿದ್ದಕ್ಕಾಗಿ ಗುಂಪೊಂದು ತರಾಟೆಗೆ ತೆಗೆದುಕೊಂಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಪಾಕಿಸ್ತಾನದ ಲಾಹೋರ್‌ನಲ್ಲಿ ಮಹಿಳೆಯೊಬ್ಬರು ಅರೇಬಿಕ್ ಭಾಷೆಯ ಮುದ್ರಣದ ಬರಹವಿರುವ ಉಡುಪನ್ನು ಧರಿಸಿಕೊಂಡು ತನ್ನ ಪತಿಯೊಂದಿಗೆ ಶಾಪಿಂಗ್‌ ಮಾಲ್‌ ಗೆ ಬಂದಿದ್ದಾರೆ. ರೆಸ್ಟೋರೆಂಟ್ ನಲ್ಲಿ ಕೂತಿದ್ದ ವೇಳೆ ಗುಂಪೊಂದು ಬಂದು ಮಹಿಳೆಯನ್ನು ತರಾಟೆ ತೆಗೆದುಕೊಂಡಿದೆ.

ನಿಮ್ಮ ಬಟ್ಟೆಯ ಮೇಲೆ ಕುರಾನ್‌ ಶ್ಲೋಕಗಳಿವೆ. ನೀವು ಇದನ್ನು ಧರಿಸಿ ಸಮುದಾಯವನ್ನು ಅವಮಾನ ಮಾಡುತ್ತಿದ್ದೀರಿ ಎಂದು ಹೇಳಿ ಗುಂಪು ಆಕೆ ಧರಿಸಿದ್ದ ಅಂಗಿಯನ್ನು ತೆಗೆಯುವಂತೆ ಆಗ್ರಹಿಸಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮಹಿಳಾ ಎಎಸ್ಪಿ ಸೈಯದಾ ಶೆಹರ್ಬಾನೊ ನಖ್ವಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮಹಿಳೆಯನ್ನು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ.

ಮಹಿಳೆ ತಾನು ಧರಿಸಿದ್ದ ಅಂಗಿಯು ಕೇವಲ ಅರೇಬಿಕ್ ಪದಗಳನ್ನು ಒಳಗೊಂಡಿದೆ. ಇದರಲ್ಲಿ ಯಾವುದೇ ಕುರಾನ್‌ ಶ್ಲೋಕಗಳ ಅರ್ಥವಿಲ್ಲ ಎಂದು ಹೇಳಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಈ ಎಎಸ್ಪಿ ಸಮಯಕ್ಕೆ ಸರಿಯಾಗಿ ರಕ್ಷಿಸದಿದ್ದರೆ ಧರ್ಮದ ಹೆಸರಿನಲ್ಲಿ ಈ ಮಹಿಳೆಯನ್ನು ಹತ್ಯೆ ಮಾಡಲಾಗುತ್ತಿತ್ತು ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಇನ್ನು ಅನೇಕರು ಮಹಿಳೆಯ ಪರವಾಗಿ ಪೋಸ್ಟ್‌ ಹಾಕಿದ್ದಾರೆ. “ಮಹಿಳೆಯ ಅಂಗಿಯ ಮೇಲೆ ಅರೇಬಿಕ್ ಭಾಷೆಯಲ್ಲಿ ಹೆಸರುಗಳಿದ್ದ ಕಾರಣ ಜನರು ಸುತ್ತುವರೆದಿದ್ದರು. ಇದನ್ನು ಕೆಲವರು ಕುರಾನ್ ಶ್ಲೋಕಗಳೆಂದು ಹೇಳುತ್ತಿದ್ದಾರೆ. ವಾಸ್ತವವಾಗಿ, ಇದು ಕುರಾನ್‌ ಶ್ಲೋಕಗಳಲ್ಲ.ಇದು ಕೇವಲ ಸರಳವಾದ ಅರೇಬಿಕ್ ಪದಗಳು ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಆನ್ಲೈನ್‌ ನಲ್ಲಿ ಸಿಗುವ ಈ ಬಟ್ಟೆಯ ಫೋಟೋವನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಯಾರನ್ನೂ ಕೋಪಗೊಳಿಸುವ ಉದ್ದೇಶವಿಲ್ಲ ಎಂದು ಮಹಿಳೆ ಪೊಲೀಸ್‌ ಠಾಣೆಯಲ್ಲಿ ಮೌಲ್ವಿಯೊಬ್ಬರ ಮುಂದೆ ಕ್ಷಮೆಯಾಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next