Advertisement
ಗ್ರೇಟರ್ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್ ಜನಪ್ರಿಯ ಮೊಬೈಲ್ ಗೇಮ್ ಪಬ್ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದಾರೆ. ಆ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದು, ಆಕೆ ಪಾಕಿಸ್ತಾನ ಮೂಲದವಳು ಆಗಿದ್ದಾಳೆ ಎನ್ನುವುದು ಅರಿತುಕೊಂಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್ ಮಾಡತೊಡಗಿದ್ದಾರೆ.
Related Articles
Advertisement
ಈ ಬಗ್ಗೆ ಪೊಲೀಸರು ಅಪಾರ್ಟ್ ಮೆಂಟ್ ನ ಮಾಲೀಕ ಬ್ರಿಜೇಶ್, ಬಳಿ ಪ್ರಶ್ನಿಸಿದ್ದಾರೆ. “ಮೇ ತಿಂಗಳಿನಿಂದ ಅವರು ಬಾಡಿಗೆ ಮನೆಯಲ್ಲಿದ್ದಾರೆ. ಕೋರ್ಟಿನಲ್ಲಿ ಮದುವೆಯಾಗಿದ್ದೇವೆ ತಮಗೆ ನಾಲ್ವರು ಮಕ್ಕಳಿದ್ದಾರೆ ಎಂದಿದ್ದರು. ಮಹಿಳೆ ಪಾಕಿಸ್ತಾನದವರಂತೆ ತೋರುತ್ತಿಲ್ಲ, ಅವರು ಸಲ್ವಾರ್ ಸೂಟ್ ಮತ್ತು ಸೀರೆಗಳನ್ನು ಧರಿಸಿದ್ದರು” ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಪೊಲೀಸರು ಸಚಿನ್ ಹಾಗೂ ಸೀಮಾರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.