ಇಸ್ಲಾಮಾಬಾದ್: ಭದ್ರತಾ ಕಾರಣ ನೀಡಿ ಪಾಕಿಸ್ತಾನ ಪ್ರವಾಸವನ್ನು ದಿಢೀರನೆ ರದ್ದುಗೊಳಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಮುಜುಗರವಾಗುವಂತಹ ಹೇಳಿಕೆಯೊಂದು ಹೊರಬಿದ್ದಿದೆ.
ಇಂಗ್ಲೆಂಡ್‌ನ ಪಾಕಿಸ್ತಾನ ರಾಯಭಾರಿ ಕ್ರಿಸ್ಟಿಯನ್ ಟರ್ನರ್, ಪಾಕ್ ಪ್ರವಾಸವನ್ನು ರದ್ದುಗೊಳಿಸಿದ್ದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸ್ವತಂತ್ರ ನಿರ್ಧಾರ. ಅದು ಸರ್ಕಾರಿ ಅಧೀನದಲ್ಲಿಲ್ಲದ ಸಂಸ್ಥೆ. ನಾವು ಪ್ರವಾಸದ ಪರವಾಗಿಯೇ ಇದ್ದೆವು, ಯಾವುದೇ ಭದ್ರತಾ ಸಮಸ್ಯೆ ಗಳನ್ನು ಗಮನಕ್ಕೆ ತಂದಿರಲಿಲ್ಲ ಎಂದಿದ್ದಾರೆ! ಇಂಗ್ಲೆಂಡ್ ರಾಯಭಾರಿಯೇ ಇಂಗ್ಲೆಂಡ್ ಮಂಡಳಿಯ ಕ್ರಮದ ವಿರುದ್ಧ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ಐಪಿಎಲ್ ನಡುವಲ್ಲೇ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ?
“ಮುಂದಿನ ವರ್ಷ ಇಂಗ್ಲೆಂಡ್ ತಂಡ ಪಾಕ್‌ನಲ್ಲಿ ಟಿ20 ಸರಣಿಯಾಡಲು ನಾನು ಗರಿಷ್ಠ ಪ್ರಯತ್ನ ಹಾಕುತ್ತೇನೆ. ನಾನೊಬ್ಬ ಕ್ರಿಕೆಟ್ ಅಭಿಮಾನಿ. ಪಾಕಿಸ್ತಾನಿ ಅಭಿಮಾನಿಗಳಿಗೆ ಆಗಿರುವ ನೋವನ್ನು ಅರ್ಥ ಮಾಡಿ ಕೊಳ್ಳಬಲ್ಲೆ’ ಎಂದು ಟರ್ನರ್ ಹೇಳಿದ್ದಾರೆ.
ಈಗಾಗಲೇ ಇಂಗ್ಲೆಂಡ್ ಮಂಡಳಿಯ ದಿಢೀರ್ ಪ್ರವಾಸ ಸ್ಥಗಿತವನ್ನು ತೀವ್ರ ಟೀಕೆಗೊಳಪಡಿಸಿರುವ ಪಾಕಿಸ್ತಾನಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.