Advertisement

ಪಾಕಿಸ್ಥಾನ ಮೊದಲು ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸಲಿ: ಭಾರತ ಖಡಕ್‌

07:27 PM Nov 28, 2018 | udayavani editorial |

ಹೊಸದಿಲ್ಲಿ : ”ಭಾರತದೊಂದಿಗೆ ಶಾಂತಿ, ಸೌಹಾರ್ದ ಬಯಸುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಎಲ್ಲಕ್ಕಿಂತ ಮೊದಲು ತನ್ನ ದೇಶದಿಂದ ಭಾರತದ ಮೇಲಾಗುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು” ಎಂದು ಹೊಸದಿಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

Advertisement

ಕರ್ತಾರ್‌ಪುರ ಕಾರಿಡಾರ್‌ ಗೆ ಪಾಕಿಸ್ಥಾನದ ಕಡೆಯಿಂದ ಶಿಲಾನ್ಯಾಸ ನೆರವೇರಿಸಿ ಮಾಡಿದ ಭಾಷಣದಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, “ಭಾರತ ಮತ್ತು ಪಾಕಿಸ್ಥಾನ ಹಿಂದಿನದೆಲ್ಲವನ್ನು ಮರೆತು ಶಾಂತಿ ಸಂಬಂಧ ಹೊಂದಬೇಕು’ ಎಂದು ಕರೆ ನೀಡಿದ್ದರು. 

ಕರ್ತಾರ್‌ಪುರ ಕಾರಿಡಾರ್‌ ಶಿಲಾನ್ಯಾಸ ಸಮಾರಂಭದಲ್ಲಿ  ಭಾರತದ ಕಡೆಯಿಂದ ಪಂಜಾಬ್‌ ಸಚಿವ ನವಜ್ಯೋತ್‌ ಸಿಂಗ್‌ ಸಿಧು, ಕೇಂದ್ರ ಸಚಿವರಾದ ಹರ್‌ಸಿಮ್ರತ್‌ ಕೌರ್‌ ಮತ್ತು ಎಚ್‌ ಎಸ್‌ ಪುರಿ ಭಾಗವಹಿಸಿದ್ದರು. 

”ಭಾರತದೊಂದಿಗೆ ಶಾಂತಿ ಸಂಬಂಧ ಬಯಸುವ ಪಾಕಿಸ್ಥಾನ ಮೊತ್ತ ಮೊದಲು ಭಾರತದ ಮೇಲಾಗುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು; ಉಗ್ರರಿಗೆ ಆಸರೆ, ಪ್ರೋತ್ಸಾಹ, ಬೆಂಬಲ, ತರಬೇತಿ ನೀಡುವುದನ್ನು ನಿಲ್ಲಿಸಬೇಕು; ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆ ಜತೆಜತೆಗೆ ಸಾಗಲಾರದು” ಎಂದು ಭಾರತ ಸ್ಪಷ್ಟಪಡಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next