ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರ ತದ ಒಳನುಸುಳಲು ಯತ್ನಿಸಿ ಭದ್ರತಾ ಪಡೆ ಗಳಿಂದ ಹತರಾಗುತ್ತಿರುವ ಉಗ್ರರ ಪೈಕಿ ಪಾಕಿಸ್ಥಾನದ ನಿವೃತ್ತ ಸೈನಿಕರೂ ಸೇರಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಶುಕ್ರವಾರ ಬಹಿರಂಗೊಂಡಿದೆ. ಈ ಮೂಲಕ ಭಯೋತ್ಪಾದನೆಗೆ ಪಾಕ್ ಸೇನೆ ಕುಮ್ಮಕ್ಕು ನೀಡುತ್ತದೆ ಎನ್ನುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಲೆಫ್ಟಿ ನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಾಹಿತಿ ನೀಡಿದ್ದು, ಗಡಿ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರು ಪಾಕಿಸ್ಥಾನ ಮತ್ತು ಅಫ^ನ್‌ನಿಂದ ತರ ಬೇತಿ ಪಡದು ಬರುತ್ತಿದ್ದಾರೆ. ಅಂಥವರ ಪೈಕಿ ಪಾಕ್‌ನ ನಿವೃತ್ತ ಸೈನಿಕರೂ ಸೇರಿ ದ್ದಾರೆ. ಆದರೆ, ನಮ್ಮ ಯೋಧರ ತ್ಯಾಗ, ಬಲಿದಾನಗಳು ಅವರ ಸಂಚುಗಳನ್ನು ವಿಫಲಗೊಳಿಸಿ ರಾಷ್ಟ್ರರಕ್ಷಣೆಯಲ್ಲಿನ ಶೌರ್ಯ ಪ್ರದರ್ಶಿಸುತ್ತಿವೆ ಎಂದಿದ್ದಾರೆ.
ರಜೌರಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥೀವ ಶರೀರಗಳಿಗೆ ಶುಕ್ರವಾರ ಅಂತಿಮ ನಮನ ಸಲ್ಲಿಸಲಾ ಯಿತು. ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಲೆ|ಜ| ದ್ವಿವೇದಿ ಸೇರಿ ಸೇನಾಧಿಕಾರಿ ಗಳು ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.
ವರ್ಷದೊಳಗೆ ಉಗ್ರರ ನಿರ್ನಾಮ: ಭದ್ರತಾಪಡೆಗಳ ಕಾರ್ಯಾಚರಣೆ ಯಗಳ ಹೊರತಾಗಿಯೂ ರಜೌರಿಯಲ್ಲಿ ಇನ್ನೂ 20ರಿಂದ 25 ಉಗ್ರರು ಸಕ್ರಿಯ ರಾಗಿದ್ದಾರೆ. ಸ್ಥಳೀಯರು ಸಹಕರಿಸಿದರೆ ಮುಂದಿನ 1 ವರ್ಷದ ಒಳಗೆ ಎಲ್ಲ ಉಗ್ರರನ್ನೂ ಸೇನೆ ಹೆಡೆಮುರಿ ಕಟ್ಟಲಿದೆ ಎಂದು ಲೆ|ಜ| ದ್ವಿವೇದಿ ಹೇಳಿದ್ದಾರೆ.