Advertisement

ಭಾರತ ಸೇನೆ ವಿರುದ್ಧ ಅಣ್ವಸ್ತ್ರ ಬಳಸುತ್ತೇವೆ : ಪಾಕ್‌ ಬೆದರಿಕೆ

11:17 AM Sep 21, 2017 | udayavani editorial |

ನ್ಯೂಯಾರ್ಕ್‌ : “ನಮ್ಮ ಬಳಿ ಕಿರು ವ್ಯಾಪ್ತಿಯ ಅಣ್ವಸ್ತ್ರಗಳಿವೆ ಮತ್ತು ನಾವದನ್ನು  ಭಾರತೀಯ ಸೇನೆಯ ವಿರುದ್ಧ ಬಳಸುತ್ತೇವೆ’ ಎಂದು ಪಾಕ್‌ ಪ್ರಧಾನಿ ಶಾಹೀದ್‌ ಖಕಾನ್‌ ಅಬ್ಟಾಸಿ ಬೆದರಿಕೆ ಹಾಕಿದ್ದಾರೆ. 

Advertisement

ಅಮೆರಿಕದ ಉನ್ನತ ಚಿಂತನ ಚಾವಡಿ “ವಿದೇಶ ಬಾಂಧವ್ಯಗಳ ಮಂಡಳಿ” ಯೊಂದಿಗೆ ಮಾತನಾಡಿದ ಪಾಕ್‌ ಪ್ರಧಾನಿ ಅಬ್ಟಾಸಿ ಅವರು “ಭಾರತವು ಪಾಕ್‌ ವಿರುದ್ಧ ಆರಂಭಿಸಿರುವ ಶೀತಲ ಆರಂಭದ ತಂತ್ರಗಾರಿಕೆಗೆ ಪ್ರತಿಯಾಗಿ ನಾವು ಕಿರು ವ್ಯಾಪ್ತಿಯ ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ನಮ್ಮ ವ್ಯೂಹಾತ್ಮಕ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ ಹೊಂದಿರುವ ಪ್ರಾಧಿಕಾರವೇ ಈ ಕಿರು ವ್ಯಾಪ್ತಿಯ ಅಣ್ವಸ್ತ್ರಗಳ ಮೇಲೂ ನಿಯಂತ್ರಣ ಹೊಂದಿದೆ’ ಎಂದು ಹೇಳಿದರು. 

ವಿಶ್ವಾದ್ಯಂತದ ನಾಯಕರಿಂದ ಏಕ ಪ್ರಕಾರದ ಖಂಡನೆಗೆ ಗುರಿಯಾಗಿರುವ ಉತ್ತರ ಕೊರಿಯದ ಅಣ್ವಸ್ತ್ರ ಬೆದರಿಕೆಗಳು ಹೆಚ್ಚುತ್ತಿರುವ ನಡುವೆಯೇ ಪಾಕ್‌ ಪ್ರಧಾನಿ ಅಬ್ಟಾಸಿ ಅವರಿಂದ ಭಾರತಕ್ಕೆ ಈ ಬೆದರಿಕೆ ಬಂದಿರುವುದು ಗಮನಾರ್ಹವಾಗಿದೆ. 

ಅಮೆರಿಕಕ್ಕೆ ಪಾಕ್‌ ಅಣ್ವಸ್ತ್ರಗಳಿಗಿಂತಲೂ ಅವುಗಳ ಸುರಕ್ಷೆಯ ಬಗ್ಗೆಯೇ ಹೆಚ್ಚಿನ ಕಳವಳ ಇದೆ. ಅಂತೆಯೇ ಪಾಕಿಸ್ಥಾನಕ್ಕೆ ತನ್ನ ಅಣ್ವಸ್ತ್ರಗಳ ಮೇಲೆ ನಿಜವಾದ ನಿಯಂತ್ರಣ ಇದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದು ಚಿಂತನ ಚಾವಡಿಯ ನಿರ್ವಾಹಕ ಡೇವಿಡ್‌ ಸ್ಯಾಂಗರ್‌ ಹೇಳಿದಾಗ, ಅಬ್ಟಾಸಿ ಅವರು, “ಪಾಕ್‌ ಅಣ್ವಸ್ತ್ರಗಳು ಸುರಕ್ಷಿತ ಮತ್ತು ಭದ್ರವಾಗಿವೆ’ ಎಂದು ಉತ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next