Advertisement

ಪ್ರಧಾನಿ ಮೋದಿ ಜತೆ ಪಾಕ್‌ PM ಇಮ್ರಾನ್‌ ಫೋನ್‌ ಮಾತುಕತೆ ಸಂಭವ ?

10:43 AM Feb 28, 2019 | Team Udayavani |

ಹೊಸದಿಲ್ಲಿ : ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್‌ ಕರೆ ಮಾಡಿ ಉಭಯ ದೇಶಗಳ ನಡುವಿನ ಸಂಭವನೀಯ ಸಮರ ಉದ್ವಿಗ್ನತೆ ಮತ್ತು ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಂಭವವಿದೆ ಎಂದು ಪಾಕ್‌ ಮೂಲಗಳನ್ನು ಉಲ್ಲೇಖೀಸಿ ನ್ಯೂಸ್‌ 18 ವರದಿ ಮಾಡಿದೆ. 

Advertisement

ಇದೇ ವೇಳೆ ಭಾರತದ ವಿದೇಶ ವ್ಯವಹಾರಗಳ ಕಾರ್ಯಾಲಯದ ಹೊರಗೆ ಜರ್ಮನಿ, ಡೊಮಿನಿಕನ್‌ ರಿಪಬ್ಲಿಕ್‌, ನೈಜೀರಿಯ, ದಕ್ಷಿಣ ಆಫ್ರಿಕ ಮತ್ತು ಬೆಲ್ಜಿಯಂ ಸೇರಿದಂತೆ ಹತ್ತು ದೇಶಗಳ ವಿದೇಶ ಕಾರ್ಯದರ್ಶಿಗಳು ಸೇರಿರುವ ದೃಶ್ಯ ಈಗ ಕಂಡುಬಂದಿದ್ದು ಭಾರತದ ವಿದೇಶ ಕಾರ್ಯದರ್ಶಿ ಭಾರತ-ಪಾಕ್‌ ಉದ್ವಿಗ್ನತೆಯ ತಾಜಾ ವಿವರಗಳನ್ನು, ಮಾಹಿತಿಗಳನ್ನು ಅವರಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಭಾರತ ಮತ್ತು ಪಾಕಿಸ್ಥಾನ ಈ ನಿರ್ಣಾಯಕ ಹಂತದಲ್ಲಿ ತಮ್ಮೊಳಗಿನ ಉದ್ವಿಗ್ನ ಸನ್ನಿವೇಶವನ್ನು ಬಗೆಹರಿಸುವ ಮಾತುಕತೆ ಮಾರ್ಗವನ್ನು ಕಂಡು ಕೊಳ್ಳಬೇಕು ಎಂದು ವಿದೇಶಿ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ. 

ಎರಡೂ ದೇಶಗಳ ಸೇನೆ ತಮ್ಮ ಮಿಲಿಟರಿ ವೃತ್ತಿಪರತೆಯನ್ನು ಪ್ರದರ್ಶಿಸಿವೆ; ಆದುದರಿಂದ ಈ ಹಂತದಲ್ಲಿ ಎರಡೂ ದೇಶಗಳು ಈ ಉದ್ವಿಗ್ನತೆಯನ್ನು ಹೆಚ್ಚಿಸಲು ಬಿಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next