Advertisement
ಪಾಕ್, ಇತರ ದೇಶಗಳಿಗೆ ಲಾಭವಾಗಲಿದೆ!
Related Articles
Advertisement
ಪಾಕಿಸ್ತಾನ ಕೂಡ ಮುಖ್ಯವಾಗಿ ಈರುಳ್ಳಿ ಬೆಳೆಯುತ್ತಿದ್ದು ಹಲವಾರು ದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತಿದೆ. ಒಂದು ವೇಳೆ ಭಾರತ ಈರುಳ್ಳಿ ರಫ್ತು ನಿಷೇಧಿಸಿದರೆ ಅದರ ಲಾಭವನ್ನು ಪಾಕಿಸ್ತಾನ ಪಡೆಯಲಿದೆ. ಅಲ್ಲದೇ ಬಾಂಗ್ಲಾದೇಶದಂತಹ ಪ್ರಮುಖ ದೇಶಕ್ಕೆ ಈರುಳ್ಳಿ ರಫ್ತು ಮಾಡಿದರೆ ನಮ್ಮ ರೈತರಿಗೆ ಅನ್ಯಾಯವಾಗಲಿದೆ ಎಂದು ಪವಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿರುವುದನ್ನು ಮಹಾರಾಷ್ಟ್ರ ಭಾಗದ ರೈತರು ಮತ್ತು ಮಹಾರಾಷ್ಟ್ರದ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಮರು ಚಿಂತಿಸುವಂತೆ ಪಿಯೂಷ್ ಗೋಯಲ್ ಜೀ ಅವರಿಗೆ ನಾನು ಮನವಿ ಮಾಡಿಕೊಂಡಿದ್ದೇನೆ ಎಂದು ಪವಾರ್ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಲಾಸಾಲ್ ಗಾಂವ್ ಮಾರುಕಟ್ಟೆಯಲ್ಲಿನ ಡಾಟಾದ ಅಂಕಿ ಅಂಶದ ಪ್ರಕಾರ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಈರುಳ್ಳಿ ದರ ದುಪ್ಪಟ್ಟಾಗಿದೆ. ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಜೂನ್-ಜುಲೈ ತಿಂಗಳಿನಲ್ಲಿ ಕೆಜಿಗೆ 20ರೂಪಾಯಿಯಿಂದ 35, 40 ರೂ.ವರೆಗೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಕ್ಕೆ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ನಟಿ- ಸಂಸದೆ ಮಿಮಿ ಚಕ್ರವರ್ತಿಯ ವಿರುದ್ಧ ಅಸಭ್ಯ ಕಮೆಂಟ್ ಮಾಡಿದ ಟ್ಯಾಕ್ಸಿ ಡ್ರೈವರ್ ಬಂಧನ
ಈರುಳ್ಳಿ ರಫ್ತು ನಿಷೇಧ ಕೇವಲ ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರನ್ನು ಮಾತ್ರ ಸಂಕಷ್ಟಕ್ಕೆ ದೂಡುವುದಿಲ್ಲ ಬದಲಿಗೆ ಇಡೀ ದೇಶದ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಅಖಿಲ ಭಾರತ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಅಜಿತ್ ನವಲೆ ತಿಳಿಸಿದ್ದಾರೆ.
ಕೇಂದ್ರದ ಈ ನಿರ್ಧಾರದಿಂದ ರೈತರು ಆಕ್ರೋಶಕ್ಕೊಳಗಾಗಿದ್ದಾರೆ. ಅಲ್ಲದೇ ಪ್ರತಿಭಟನೆ ನಡೆಸುವುದಾಗಿಯೂ ನವಲೆ ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಲು ಬಿಹಾರ ಚುನಾವಣೆಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.