Advertisement

ಭಾರತ-ಪಾಕ್‌ ಗುಜರಾತ್‌ ಗಡಿ ದಾಟಿ ಬಂದ ಪಾಕ್‌ ಪ್ರಜೆ ವಶಕ್ಕೆ

09:21 AM Mar 29, 2019 | Sathish malya |

ಹೊಸದಿಲ್ಲಿ : ಗುಜರಾತ್‌ ನಲ್ಲಿನ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ದಾಟಿ ಬಂದ ಪಾಕಿಸ್ಥಾನೀ ಪ್ರಜೆಯೊಬ್ಬನನ್ನು ಬಿಎಸ್‌ಎಫ್ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಂಧಿತ ಮುಹಮ್ಮದ್‌ ಅಲಿ (35) ಸಿಂಧಿ ಭಾಷೆ ಮಾತನಾಡುತ್ತಿದ್ದ. ಆತನನ್ನು ಬಿಎಸ್‌ಎಫ್ ಯೋಧರು ಕುಮಾರ್‌ ಗಡಿ ಠಾಣೆ ಸಮೀಪ ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡರು.

ಬಂಧಿತ ಪಾಕ್‌ ಪ್ರಜೆಯಿಂದ ಏನೂ ಸಿಕ್ಕಿಲ್ಲ; ಆದರೆ ಆತನನ್ನು ಕೇಂದ್ರ ಭದ್ರತಾ ದಳದ ಸಿಬಂದಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next