Advertisement

ಗಡಿ ರೇಖೆ ಬಳಿ ಬಂದ ಪಾಕ್‌ ಹೆಲಿಕಾಪ್ಟರ್‌

12:30 PM Feb 22, 2018 | Team Udayavani |

ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೆಂಬಂತೆ, ಪಾಕಿಸ್ಥಾನಿ ಮಿಲಿಟರಿ ಹೆಲಿಕಾಪ್ಟರ್‌ವೊಂದು ಬುಧವಾರ ಜಮ್ಮು -ಕಾಶ್ಮೀರದ ಪೂಂಛ ವಲಯದ ಗಡಿ ನಿಯಂತ್ರಣ ರೇಖೆಗಿಂತ  300 ಮೀ. ದೂರಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬೆಳಗ್ಗೆ 9.45ರಿಂದ 10 ರ ಒಳಗೆ ನಡೆದಿದೆ.

Advertisement

ಈ ವೇಳೆ ಎರಡೂ ಬದಿಗಳಿಂದ ಯಾವುದೇ ಗುಂಡಿನ ದಾಳಿ, ಬಂಧನದಂಥ ಕ್ರಮಗಳು ನಡೆದಿಲ್ಲ ಎಂದೂ ಅವರು ತಿಳಿಸಿದ್ದಾರೆ. ಉಭಯ ದೇಶಗಳ ಒಪ್ಪಂದದ ಪ್ರಕಾರ, ರೋಟರಿ ವಿಂಗ್‌ ವಿಮಾನಗಳು ಎಲ್‌ ಒಸಿಗೆ 1 ಕಿ.ಮೀ. ಸಮೀಪ ಬರುವಂತಿಲ್ಲ. ಫಿಕ್ಸೆಡ್‌ ವಿಂಗ್‌ ವಿಮಾನಗಳು 10 ಕಿ.ಮೀ. ವ್ಯಾಪ್ತಿಯೊಳಗೆ ಬರುವಂತಿಲ್ಲ. ಬುಧವಾರ ಕಾಪ್ಟರ್‌ 300 ಮೀ. ದೂರದಲ್ಲಿ ಬಂದು ವಾಪಸಾಯಿತು. ಈ ಕುರಿತು ಪಾಕ್‌ ಜೊತೆ ಮಾತುಕತೆಗೆ ಸೇನೆ ಮುಂದಾಗಿದೆ.

ಕದನ ವಿರಾಮ ಉಲ್ಲಂಘನೆ: ಇನ್ನೊಂದೆಡೆ, ಜಮ್ಮು- ಕಾಶ್ಮೀ ರದ ಕುಪ್ವಾರಾದಲ್ಲಿ ಪಾಕಿಸ್ಥಾನವು ಬುಧವಾರ ಕದನ ವಿರಾಮ ಉಲ್ಲಂ ಸಿದೆ. ತಂಗ್‌ಧಾರ್‌ ವಲಯದಲ್ಲಿ ಅಪ್ರ ಚೋ ದಿತ ಗುಂಡಿನ ದಾಳಿ ನಡೆದಿದ್ದು, ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿ, ಪಾಕ್‌ ಸೈನಿಕನನ್ನು ಹತ್ಯೆಗೈದಿದೆ.

Advertisement

Udayavani is now on Telegram. Click here to join our channel and stay updated with the latest news.

Next