Advertisement

ಅನರ್ಹಗೊಂಡ ಪಾಕ್‌ ಸಚಿವ

06:00 AM Apr 27, 2018 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಹಿಂದಿನ ಸಾರ್ವತ್ರಿಕ ಚುನಾವಣೆಯ ವೇಳೆ, ತಮ್ಮ ಆದಾಯದ ವಿವರ ಮುಚ್ಚಿಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ವಿದೇಶಾಂಗ ಸಚಿವ ಖ್ವಾಜಾ ಆಸಿಫ್ರನ್ನು ಸಂಸದ ಸ್ಥಾನದಿಂದ ಇಸ್ಲಾಮಾಬಾದ್‌ ಹೈಕೋರ್ಟ್‌ ಶಾಶ್ವತವಾಗಿ ಅನರ್ಹಗೊಳಿಸಿದೆ. ಸದ್ಯದಲ್ಲೇ ಮಹಾ ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಆಡಳಿತಾರೂಢ ಪಿಎಂಎಲ್‌-ಎನ್‌ ಪಕ್ಷಕ್ಕೆ ಈ ತೀರ್ಪು ಮತ್ತೂಂದು ಪೆಟ್ಟು ಕೊಟ್ಟಿದೆ. ಇತ್ತೀಚೆಗಷ್ಟೇ ಮಾಜಿ ಪ್ರಧಾನ ಮಂತ್ರಿ ನವಾಜ್‌ ಷರೀಫ್ರನ್ನು ಶಾಶ್ವತವಾಗಿ ಅನರ್ಹಗೊಳಿ ಸಲಾಗಿತ್ತು.

Advertisement

ಯುಎಇನಲ್ಲಿ ಉದ್ಯೋಗ ಪರವಾನಗಿ ಪಡೆದಿರುವ ಖ್ವಾಜಾ ಆಸಿಫ್ ನಿರ್ದಿಷ್ಟ ವೇತನ ಪಡೆಯುತ್ತಿದ್ದರೂ, 2013ರ ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ಆದಾಯ ಮುಚ್ಚಿಟ್ಟಿದ್ದಾರೆಂದು, ಪ್ರತಿಸ್ಪರ್ಧಿ ಪಾಕಿಸ್ತಾನ್‌ ತೆಹ್ರೀಕ್‌-ಎ-ಇನ್ಸಾಫ್ ನಾಯಕ ಉಸ್ಮಾನ್‌ ದರ್‌, ದೂರು ಸಲ್ಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next