ಹರಾರೆ: ಆತಿಥೇಯ ಜಿಂಬಾಬ್ವೆ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕಿಸ್ಥಾನ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ.
ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲು 4ನೇ ದಿನದಾಟದಲ್ಲಿ ಪಾಕಿಸ್ಥಾನಕ್ಕೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು. 5 ಓವರ್‌ಗಳ ಆಟದೊಳಗೆ ಈ ವಿಕೆಟ್ ಕಿತ್ತು ಇನ್ನಿಂಗ್ಸ್ ಹಾಗೂ 147 ರನ್ನುಗಳಿಂದ ಗೆದ್ದು ಬಂದಿತು. ಫಾಲೋಆನ್‌ಗೆ ಸಿಲುಕಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಜಿಂಬಾಬ್ವೆ 231ಕ್ಕೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಪಾಕಿಸ್ಥಾನದ ಮೂವರು ಬೌಲರ್ 5 ವಿಕೆಟ್ ಉರುಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಹಸನ್ ಅಲಿ (27ಕ್ಕೆ 5), ದ್ವಿತೀಯ ಸರದಿಯಲ್ಲಿ ಶಾಹಿದ್ ಅಫ್ರಿದಿ (52ಕ್ಕೆ 5) ಮತ್ತು ನೌಮಾನ್ ಅಲಿ (86ಕ್ಕೆ 5) ಈ ಸಾಧನೆಗೈದರು.
ಇದನ್ನೂ ಓದಿ :ಇಂಗ್ಲೆಂಡ್ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್ ಭವಿಷ್ಯ
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-8ಕ್ಕೆ 510 ಡಿಕ್ಲೇರ್. ಜಿಂಬಾಬ್ವೆ-132 ಮತ್ತು 231 (ಚಕಾಬÌ 80, ಟೇಲರ್ 49, ಜೊಂಗ್ವೆ 37, ಅಫ್ರಿದಿ 52ಕ್ಕೆ 5, ನೌಮಾನ್ 86ಕ್ಕೆ 5). ಪಂದ್ಯಶ್ರೇಷ್ಠ: ಅಬಿದ್ ಅಲಿ. ಸರಣಿಶ್ರೇಷ್ಠ: ಹಸನ್ ಅಲಿ.