Advertisement

ಏಷ್ಯಾ ಕಪ್‌: ಪಾಕಿಸ್ಥಾನಕ್ಕೆ ಭರ್ಜರಿ ಗೆಲುವು ಹಾಂಕಾಂಗ್‌ 38 ರನ್ನಿಗೆ ಪತನ

11:17 PM Sep 02, 2022 | Team Udayavani |

ಶಾರ್ಜಾ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು “ಬಿ’ ಬಣದ ಮಹತ್ವದ ಪಂದ್ಯದಲ್ಲಿ ಹಾಂಕಾಂಗ್‌ ತಂಡವನ್ನು 155 ರನ್ನುಗಳಿಂದ ಸೋಲಿಸಿ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಸೂಪರ್‌ ಫೋರ್‌ ಹಂತಕ್ಕೇರಿತು.

Advertisement

ಪಾಕಿಸ್ಥಾನದ ಬೌಲರ್‌ಗಳ ದಾಳಿಗೆ ನೆಲಕಚ್ಚಿದ ಹಾಂಕಾಂಗ್‌ ಆಟಗಾರರು ಕೇವಲ 10.4 ಓವರ್‌ಗಳಲ್ಲಿ ಕೇವಲ 38 ರನ್ನಿಗೆ ಆಲೌಟಾದರು. ತಂಡದ ಯಾವುದೇ ಆಟಗಾರ ಎರಡಂಕೆಯ ಮೊತ್ತ ತಲುಪಲಿಲ್ಲ. ಈ ಮೊದಲು ಮೊಹಮ್ಮದ್‌ ರಿಜ್ವಾನ್‌, ಖಾಶಿªಲ್‌ ಶಾ ಮತ್ತು ಫ‌ಖಾರ್‌ ಜಮಾನ್‌ ಅವರ ಉತ್ತಮ ಆಟದಿಂದಾಗಿ ಪಾಕಿಸ್ಥಾನವು ಎರಡು ವಿಕೆಟಿಗೆ 193 ರನ್ನುಗಳ ಬೃಹತ್‌ ಮೊತ್ತ ಪೇರಿಸಿತ್ತು.

ಬೌಲರ್‌ಗಳ ಅದ್ಭುತ ದಾಳಿಗೆ ಹಾಂಕಾಂಗ್‌ ಆಟಗಾರರು ತತ್ತರಿಸಿ ಹೋದರು. ಶಾದಾಬ್‌ ಖಾನ್‌ ಮತ್ತು ಮೊಹಮ್ಮದ್‌ ನವಾಜ್‌ ಅವರ ನಿಖರ ದಾಳಿ ಸಂಘಟಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಶಾದಾಬ್‌ ತನ್ನ 2.4 ಓವರ್‌ಗಳ ದಾಳಿಯಲ್ಲಿ ಕೇವಲ 8 ರನ್ನಿಗೆ 4 ವಿಕೆಟ್‌ ಕಿತ್ತರೆ ನವಾಜ್‌ 5 ರನ್ನಿಗೆ 3 ವಿಕೆಟ್‌ ಉರುಳಿಸಿದರು. ನಸೀಮ್‌ ಶಾ ಎರಡು ವಿಕೆಟ್‌ ಪಡೆದರು. ಹಾಂಕಾಂಗ್‌ನ ಆರಂಭಿಕ ಆಟಗಾರ ನಿಝಕಾತ್‌ ಖಾನ್‌ 8 ರನ್‌ ಗಳಿಸಿದ್ದು ಗರಿಷ್ಠ ಮೊತ್ತವಾಗಿತ್ತು.

ಈ ಮೊದಲು ಆರಂಭಿಕ ಆಟಗಾರ ಮೊಹಮ್ಮದ್‌ ರಿಜ್ವಾನ್‌, ಜಮಾನ್‌ ಅವರ ಅರ್ಧಶತಕ ಮತ್ತು ಕೊನೆ ಹಂತದಲ್ಲಿ ಖಾಶಿªರ್‌ ಶಾ ಅವರ ಬಿರುಸಿನ ಆಟದಿಂದಾಗಿ ಪಾಕಿಸ್ಥಾನ ಉತ್ತಮ ಮೊತ್ತ ಪೇರಿಸಿತು. ರಿಜ್ವಾನ್‌ 78 ರನ್‌ ಗಳಿಸಿ ಅಜೇಯರಾಗಿ ಉಳಿದರೆ ಜಮಾನ್‌ 53, ಖಾಶಿªರ್‌ 15 ಎಸೆತಗಳಲ್ಲಿ 35 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next