Advertisement
ತಾಲಿಬಾನ್ ನಿರ್ಬಂಧದ ಮೇಲೆ ನಿಗಾ ಇಟ್ಟಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಂಡದ ವರದಿಯು ಈ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಆಫ್ಘನ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ನಂತರದಲ್ಲಿ ಈ ತಂಡ ಸಲ್ಲಿಸಿದ ಮೊದಲ ವರದಿ ಇದಾಗಿದೆ.
Related Articles
ಅಲ್‌ಖೈದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ (ಎಕ್ಯೂಐಎಸ್) ನಿಯತಕಾಲಿಕೆಯ ಹೆಸರನ್ನು ಬದಲಿಸಿರುವುದು ಹೊಸ ಅನುಮಾನಗಳಿಗೆ ಕಾರಣವಾಗಿದೆ. “ನವಾ-ಇ ಆಫ^ನ್ ಜಿಹಾದ್’ ಎಂದಿದ್ದ ನಿಯತಕಾಲಿಕೆಯ ಹೆಸರನ್ನು “ನವಾ-ಇ-ಗಜ್ವಾ-ಎ-ಹಿಂದ್’ ಎಂದು ಬದಲಿಸಲಾಗಿದೆ. ಇದು ಎಕ್ಯೂಐಎಸ್ ಉಗ್ರ ಸಂಘಟನೆಯು ಆಫ^ನ್‌ನಿಂದ ಹೊರಬಂದು ಕಾಶ್ಮೀರದಲ್ಲಿ ನೆಲೆಗೊಳ್ಳಲು ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಈಗಾಗಲೇ ಅಫ್ಘಾನಿಸ್ತಾನದಲ್ಲಿ ಈ ಸಂಘಟನೆಯ ಪ್ರಭಾವ ಮತ್ತು ಕಾರ್ಯಚಟುವಟಿಕೆ ತಗ್ಗುತ್ತಿದೆ.
Advertisement
ಸಂಘಟನೆಯಲ್ಲಿ 180-400 ಹೋರಾಟಗಾರರು ಇದ್ದಾರೆ. ಅವರ ಮೂಲ ಭಾರತ, ಬಾಂಗ್ಲಾದೇಶ, ಮಯೆನ್ಮಾರ್, ಪಾಕಿಸ್ತಾನವಾಗಿದೆ. 2019ರ ಏಪ್ರಿಲ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ದಾಳಿಯ ಬಳಿಕ ಈ ನಿಯತಕಾಲಿಕೆಯು, “ಕಾಶ್ಮೀರದಲ್ಲಿ ಜಿಹಾದ್‌ಗೆ ಜವಾಹಿರಿ ಕರೆ ಕೊಟ್ಟಿದ್ದ’ ಎಂಬುದನ್ನು ನೆನಪಿಸಿತ್ತು. ಈ ಎಲ್ಲ ಬೆಳವಣಿಗೆಗಳು, ಅಲ್‌ಖೈದಾವು ಕಾಶ್ಮೀರದಲ್ಲಿ ಸಕ್ರಿಯಗೊಳ್ಳಲು ಪ್ರಯತ್ನಿಸುತ್ತಿರುವ ಸುಳಿವು ನೀಡಿವೆ.