ಕಟಪಾಡಿ: ಉಡುಪಿ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಯತಿಶ್ರೇಷ್ಠ, ಇತ್ತೀಚೆಗೆ ಕೃಷ್ಣೆ„ಕ್ಯರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮುತುವರ್ಜಿಯಿಂದ ಕಟ್ಟಿ ಬೆಳೆಸಿದ ಪಾಜಕದ ಆನಂದತೀರ್ಥ ವಿದ್ಯಾಲಯ ಮತ್ತು ಈಗಾಗಲೇ ನಿರ್ಮಾಣ ಹಂತದಲ್ಲಿ ಇರುವ ಆನಂದತೀರ್ಥ ಪ.ಪೂ. ಕಾಲೇಜಿಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತಿರುವ ಆನ್‌ಲೈನ್ ತರಗತಿಗಳ ಬಗ್ಗೆ ಮಾಹಿತಿ ಪಡೆದರು.
ಇದೇ ಸಂದರ್ಭ ಈಗಾಗಲೇ ಪ್ರಥಮ ವರ್ಷ ಪೂರೈಸಿ ದ್ವಿತೀಯ ವರ್ಷಕ್ಕೆ ಕಾಲಿಡುತ್ತಿರುವ ಆನಂದತೀರ್ಥ ಪ.ಪೂ. ಕಾಲೇಜು ಕಟ್ಟಡದ ನಿರ್ಮಾಣ ಕೆಲಸ ಭರದಿಂದ ಸಾಗಿದ್ದು, ಅದನ್ನು ವೀಕ್ಷಿಸಿದರು.
ಶಾಲಾ ಆವರಣದಲ್ಲಿ ಹತ್ತಾರು ಗಿಡಗಳನ್ನು ಪ್ರತೀ ವರ್ಷವೂ ಬೆಳೆಸಲಾಗುತ್ತದೆ. ಸ್ವತಃ ಪರಿಸರ ಪ್ರೇಮಿ ಯಾಗಿರುವ ಶ್ರೀಗಳು ಈ ವರ್ಷಖುದ್ದು ಗಿಡನೆಟ್ಟು, ಪರಿಸರ ಕಾಳಜಿ ಮೆರೆದರು.
ಸುಸಜ್ಜಿತ ಕ್ರೀಡಾಂಗಳ ವೀಕ್ಷಣೆ
ಕಾಲೇಜು ಆವರಣದೊಳಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣವಾಗು ತ್ತಿರುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ್ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಆಡಳಿತ ಮಂಡಳಿಯ ಸದಸ್ಯರು, ಕಾಲೇಜು ಪ್ರಾಂಶುಪಾಲ ವಿಜಯ್ ರಾವ್, ಶಾಲಾ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್, ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.