ದೇವನಹಳ್ಳಿ: ಬಣ್ಣಗಳ ಮುಖಾಂತರ ಬಿಳಿಹಾಳೆ ಯಲ್ಲಿ ಪರಿಸರದ ಉಳಿವು ಮತ್ತು ಅಳಿವುಗಳನ್ನು ಚಿತ್ರಿಸುವ ಸೂಪ್ತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕಂತಾಗಿದೆ. ವಸ್ತುಸ್ಥಿತಿಯನ್ನು ಕುಂಚದ ಮುಖಾಂ ತರ ಹೊರಹಾಕುವ ಕಲೆಯೇ ಚಿತ್ರಕಲೆಯಾಗಿರು ತ್ತದೆ ಎಂದು ಕೆನರಾಬ್ಯಾಂಕ್ ಕನ್ನಮಂಗಲ ಶಾಖೆಯ ವ್ಯವಸ್ಥಾಪಕಿ ಕೆ.ಎಂ.ಶ್ರುತಿ ಅಭಿಪ್ರಾಯ ಪಟ್ಟರು.
ತಾಲೂಕಿನ ದೊಡ್ಡಪ್ಪನಹಳ್ಳಿ ಗ್ರಾಮದಲ್ಲಿನ ಡಾ.ಎಪಿಜೆ ಅಬ್ದುಲ್ ಕಲಾಂ ಇಂಗ್ಲಿಷ್ ಶಾಲೆಯಲ್ಲಿ ದೇವನಹಳ್ಳಿ ಸರಸ್ವತಿ ಸಂಗೀತ ವಿದ್ಯಾಲಯದಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡಮರಗಳ ಮಾರಣ ಹೋಮವನ್ನೇ ನಡೆಸಿದ್ದಾನೆ. ಇಂದಿನ ಪೀಳಿಗೆ ಇದರ ಸಾಧಕ, ಬಾಧಕಗಳನ್ನು ಅರಿತು ಗಿಡಮರಗಳ ಪರಿಸರ ಉಳಿವಿನತ್ತ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಕೃತಿಯ ಮೇಲೆ ದೌರ್ಜನ್ಯ: ಸ.ಸಂ.ವಿ. ಕಾರ್ಯದರ್ಶಿ ಮಂಜುನಾಥ ಜಿ. ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾಳಾಗುತ್ತಿದೆ. ಈಗಾಗಲೇ ಮಾನವನಿಂದ ಪ್ರಕೃತಿಯ ಮೇಲೆ ಹಲವು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದರಿಂದಾಗಿ ಗಿಡ-ಮರಗಳ ಬೆಳವಣಿಗೆ ಯಲ್ಲಿ ಕುಂಠಿತ ಕಾಣುತ್ತಿದೆ. ಆರೋಗ್ಯಕರವಾದ ಪ್ರಾಣವಾಯು ಸಿಗದೆ ಜೀವ ವೈವಿಧ್ಯತೆಗಳಾದ ನದಿಗಳು, ವನ್ಯಜೀವಿ, ಪಕ್ಷಿಗಳು ನಾಶದ ಸ್ಥಿತಿಯಲ್ಲಿವೆ.
ಈ ಬಗ್ಗೆ ನಾಗರಿಕರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಕೇವಲ ವರ್ಷಕ್ಕೊಂದು ದಿನ ಮಾತ್ರವೇ ಪರಿಸರ ದಿನವನ್ನು ಆಚರಿಸದೇ ನಿತ್ಯವೂ ಪರಿಸರ ದಿನವನ್ನು ಆಚರಿಸಬೇಕು. ಸಭೆ- ಸಮಾರಂಭಗಳಲ್ಲಿ ಉಡುಗೊರೆಗಳ ಜೊತೆಗೆ ಒಂದೊಂದು ಸಸಿಯನ್ನು ನೀಡುವುದು ರೂಢಿಸಿ ಕೊಳ್ಳುವುದು ಉತ್ತಮ ಎಂದು ಹೇಳಿದರು.
ವೇದಿಕೆ ಒದಗಿಸಿರುವುದು ಸಂತೋಷ: ಡಾ. ಎಪಿಜೆ ಅಬ್ದುಲ್‌ಕಲಾಂ ಇಂಗ್ಲಿಷ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಫಯಾಜ್ ಪಾಷಾ ಮಾತನಾಡಿ, ಇಂದು ಪ್ರಪಂಚದೆಲ್ಲೆಡೆ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ಈ ಶಾಲೆಯಲ್ಲಿ ಈ ದಿನವನ್ನು ಮಕ್ಕಳಿಗೆ ಚಿತ್ರ ಬಿಡಿಸುವ ಮೂಲಕ ಅವರ ಚಿಂತನೆಗೆ ಕುಂಚದ ಮೂಲಕ ವೇದಿಕೆ ಒದಗಿಸಿರುವುದು ಸಂತೋಷದ ವಿಷಯವಾಗಿದೆ ಎಂದರು. ಡಾ. ಎಪಿಜೆ ಅಬ್ದುಲ್ ಕಲಾಂ ಇಂಗ್ಲಿಷ್ ಶಾಲೆಯ ಪ್ರಾಂಶು
ಪಾಲ ಮುಯೀನ್, ಶಿಕ್ಷಕ ನಯನಾ, ಮುನಿರಾಜು,ರಾಮಾಂಜಿ, ಸುಲ್ತಾನ, ನಸೀಮಾ, ಜಯಶ್ರೀ, ಜಕೀರಾ, ಕಲಾವತಿ, ರಾಜೇಶ್ವರಿ, ರಮೇಶ್, ವೈಷ್ಣವಿ, ಪೂರ್ಣಿಮಾ, ಭಾಗ್ಯ, ಶಾಲಾ ಸಿಬ್ಬಂದಿ, ಸ.ಸಂ.ವಿದ್ಯಾ ಲಯದ ಸಂಸ್ಥಾಪಕ ಬಿ.ಕೆ. ಗೋಪಾಲ್, ಖಜಾಂಚಿ ಜಿ. ನೇತ್ರಾವತಿ, ಚಿನ್ಮಯಿಕೃಷ್ಣ ಇದ್ದರು.