ಬೆಂಗಳೂರು: ಎಲೆಕ್ಟ್ರಾನಿಕ್, ಗೃಹ ಬಳಕೆ ಹಾಗೂ ಫರ್ನಿಚರ್ ವಸ್ತುಗಳ ಅತಿ ದೊಡ್ಡ “ಬಹು ಬ್ರಾಂಡ್’ ಮಾರಾಟ ಮಳಿಗೆಯಾದ “ಪೈ ಇಂಟರ್‌ನ್ಯಾಷನಲ್; ತನ್ನ ಸೇವೆ ಮತ್ತು ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದೀಗ ಬೆಂಗಳೂರಿನ ಹೊಸೂರು ಮುಖ್ಯರಸ್ತೆಯಲ್ಲಿ ನೂತನ ಮಳಿಗೆ ಆರಂಭಿಸಿದೆ.
ಹೊಸೂರು ಮುಖ್ಯ ರಸ್ತೆಯ ಬೊಮ್ಮನಹಳ್ಳಿಯಲ್ಲಿರುವ ಗಾರೆಬಾವಿ ಪಾಳ್ಯದಲ್ಲಿ 21 ಸಾವಿರ ಚದರಡಿ ವಿಸ್ತೀರ್ಣದ ಬೃಹತ್ ಮಳಿಗೆಯಲ್ಲಿ ಗ್ರಾಹಕರ ಸೇವೆಗೆ ತೆರೆದುಕೊಂಡಿರುವ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹೆಸರಿನ ಈ ಮಾರಾಟ ಮಳಿಗೆ ಬುಧವಾರ (ಅ.18) ದಂದು ಗ್ರಾಹಕರಿಗೆ ಮುಕ್ತವಾಗಿದೆ.
ಇಲ್ಲಿ ಪೈ ಎಲೆಕ್ಟ್ರಾನಿಕ್ಸ್ ಮತ್ತು ಪೈ ಫರ್ನಿಚರ್ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಈ ಕುರಿತು ಮಾಹಿತಿ ನೀಡಿದ, ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಪೈ, ಗ್ರಾಹಕರಿಗೆ ಜಾಗತಿಕ ಗುಣಮಟ್ಟದ ಖರೀದಿ ಅನುಭವ ನೀಡುವುದು ನಮ್ಮ ಸಂಸ್ಥೆಯ ವಾಗ್ಧಾನವಾಗಿದ್ದು, ಅದನ್ನು ಎಲ್ಲ ಹಂತ ಮತ್ತು ಎಲ್ಲ ಸಂದರ್ಭಗಳಲ್ಲೂ ಪಾಲಿಸಿಕೊಂಡು ಬರಲಾಗಿದೆ ಎಂದರು.
ಹೊಸೂರು ಮುಖ್ಯರಸ್ತೆಯಲ್ಲಿ ಆರಂಭವಾಗಿರುವ ಮಳಿಗೆಯಲ್ಲಿ ಅತ್ಯಾಕರ್ಷಕ ಆಫರ್ ಗಳನ್ನು ನೀಡಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಮೆಗಾ ಫೆಸ್ಟಿವಲ್ ಸೇಲ್ ಹೆಸರಲ್ಲಿ 2 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಖರೀದಿ ಮಾಡಿದರೆ ಪೈ ವಿಶೇಷ ಲಕ್ಕಿ ಕೂಪನ್ ಮೂಲಕ ಗ್ರಾಹಕರು 30 ಕಾರುಗಳನ್ನು ಗೆಲ್ಲಬಹುದು.
ಅದರಲ್ಲಿ ಮೊದಲನೆಯದು ಮೆಗಾ ಬಂಪರ್ ಬಹುಮಾನ 10 ಹುಂಡೈ ಎಕ್ಸಂಟ್ ಕಾರುಗಳು. ಎರಡನೇಯದು ಸೂಪರ್ ಬಂಪರ್ ಬಹುಮಾನ 10 ಹುಂಡೈ ಐ10 ಕಾರುಗಳು ಮತ್ತು ಮೂರನೆಯದಾಗಿ ಬಂಪರ್ ಬಹುಮಾನ 10 ಹುಂಡೈ, ಇಒಎನ್ ಕಾರುಗಳು ಹಾಗೂ ಪೈ ಮೊಬೈಲ್ಸ್ ಮತ್ತು ಪೈ ಫರ್ನಿಚರ್‌ಗಳ ಮೇಲೆ ವಿಶೇಷ ಆಫರ್‌ಗಳು ಸಿಗಲಿವೆ.
ಸ್ಪೆಷಲ್ ಬೋನಸ್ ರೂಪದಲ್ಲಿ ಒಟ್ಟು 10 ಕೋಟಿ ರೂ. ಮೌಲ್ಯದ ಬಹುಮಾನಗಳು, ಜೊತೆಗೆ 82,270 ಇನ್ನುಳಿದ ಬಹುಮಾನಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ, 5 ಸಾವಿರ ಹಾಗೂ ಅದಕ್ಕಿಂತ ಮೇಲ್ಪಟ್ಟ ಮೊತ್ತದ ಮೊಬೈಲ್ ಖರೀದಿ ಮಾಡಿದ ಗ್ರಾಹಕರಿಗೆ ಸಾðಚ್ ಕಾರ್ಡ್ ಸಿಗಲಿದ್ದು, ಗೆದ್ದರೆ ಶೇ.100ರಷ್ಟು ಹಣ ವಾಪಸ್ ಸಿಗಲಿದೆ.