Advertisement
ಮಂಗಳೂರು ತಾಲೂಕಿನ ಹೆಚ್ಚಿನ ಗ್ರಾ.ಪಂ. ಗಳಲ್ಲಿ ಸಭಾಭವನಗಳು ಈಗಾಗಲೇ ನಿರ್ಮಾಣಗೊಂಡಿದ್ದರೂ ಪಡು ಪೆರಾರ ಗ್ರಾ.ಪಂ. ಪಂಚಾಯತ್ ನಲ್ಲಿ ಮಾತ್ರ ಸಭಾಭವನವೇ ಇಲ್ಲ. ಗ್ರಾ.ಪಂ. ನ ಮೂಲ ಸೌಕರ್ಯಗಳಲ್ಲಿ ಒಂದಾದ ಸಭಾಭವನ ಇಲ್ಲದೆ ಖಾಸಗಿ ಸಭಾಭವನಗಳಲ್ಲೇ ಗ್ರಾಮ ಸಭೆಗಳನ್ನು ನಡೆಸಬೇಕಾಗಿದೆ.
ಪಡುಪೆರಾರ ಗ್ರಾಮ ಪಂಚಾಯತ್‌ಗೆ 2015- 16ರಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 75 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಇದರಲ್ಲಿ ರಸ್ತೆ, ಗ್ರಾಮ ಪಂಚಾಯತ್ ಸಭಾಭವನ, ಜಿಮ್ ಕೇಂದ್ರ, ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಪಂಚಾಯತ್ ನಡಾವಳಿಯನ್ನು ನೇರ ಪ್ರಸಾರ ಮಾಡುವ ಬಗ್ಗೆ ಕ್ರಿಯಾ ಯೋಜನೆಗೆ ಅನು ಮೋ ದನೆ ನೀಡಲಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್ ಸಭಾಭವನಕ್ಕೆ 9 ಲಕ್ಷ ರೂ. ಮತ್ತು ಜಿಮ್ ಕೇಂದ್ರಕ್ಕೆ 9 ಲಕ್ಷ ರೂ. ಮೀಸಲಿಡಲಾಗಿತ್ತು. ಕ್ರಿಯಾ ಯೋಜನೆಯಲ್ಲಿದ್ದ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಕಾಮಗಾರಿಗಳು ಮಾತ್ರ ನಡೆದಿಲ್ಲ. ಇದರ ಅನುದಾನವನ್ನೂ ಗ್ರಾಮ ಪಂಚಾಯತ್ ಇನ್ನೂ ಬಳಕೆ ಮಾಡಿಲ್ಲ. ಈಗಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇನ್ನು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಅಸಾಧ್ಯ.
Related Articles
Advertisement
ಗ್ರಾಮ ಪಂಚಾಯತ್ ನಲ್ಲೇ ನರೇಗಾ ಸಭೆನರೇಗಾ ಯೋಜನೆಯ ಗ್ರಾಮ ಸಭೆಗಳು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯುತ್ತದೆ. ಈ ಸಭೆ ಇದ್ದಾಗ ಕಚೇರಿಯ ಒಂದು ಭಾಗದಲ್ಲಿ ಸಭೆ, ಇನ್ನೊಂದು ಭಾಗದಲ್ಲಿ ಕಚೇರಿ ಕಾರ್ಯ ನಡೆಯುತ್ತದೆ. ಆದರೆ ಸಭೆ ನಡೆಯುವಾಗ ಗ್ರಾಮಸ್ಥರು ಕಚೇರಿ ಕಾರ್ಯಕ್ಕೆ ಬರಲು ಸಾಧ್ಯವಿಲ್ಲದಂತಾಗಿದೆ. ಇಕಟ್ಟಾದ ಕಟ್ಟಡದಲ್ಲಿ ಬಂದವರು ಸಭೆ ಮುಗಿಯುವವರೆಗೆ ಕಾದುಕುಳಿತುಕೊಳ್ಳಬೇಕು. ಗ್ರಾಮಸ್ಥರಿಂದಲೂ ಮನವಿ
ಪಂಚಾಯತ್ ಸಾಮಾನ್ಯ ಸಭೆಯಲ್ಲಿ, ಗ್ರಾಮಸಭೆಯಲ್ಲಿ ಸಭಾಭವ ನದ ಬಗ್ಗೆ ಗ್ರಾಮಸ್ಥರ ಮನವಿ ಕೂಡ ಬಂದಿತ್ತು. ಶಾಸಕರು ಕೂಡ ಈ ಬಗ್ಗೆ ಗ್ರಾ. ಪಂ.ಸಭೆಯಲ್ಲಿ ಇಟ್ಟು ನಿರ್ಣಯ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಸಭೆಗೆ ಹಾಜರಾಗದ ಕೆಐಆರ್ ಡಿಎಲ್
ಗ್ರಾ.ಪಂ.ನ ಪಾರದರ್ಶಕ ಆಡಳಿತಕ್ಕೆ ಸಭಾಭವನ ಇರಬೇಕು. ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಈ ಬಗ್ಗೆ ಗ್ರಾ.ಪಂ. ನಿಂದ ಕೆಐಆರ್‌ಡಿಎಲ್ ಸಂಸ್ಥೆಗೆ ಈಗಾಗಲೇ ಮನವಿ ಮಾಡಲಾಗಿದೆ. ಮಾ. 31ಕ್ಕೆ ಗ್ರಾಮ ವಿಕಾಸ ಯೋಜನೆಯ ಅನುದಾನಕ್ಕೆ ಅವಧಿ ಪೂರ್ಣಗೊಳ್ಳುವ ಮುನ್ನವೇ ಕಾಮಗಾರಿ ಆರಂಭಿಸಬೇಕಿತ್ತು. ಸಭಾಭವನ ನಿರ್ಮಾಣಕ್ಕೆ ಹಳೆ ಪಂಚಾಯತ್ ಕಟ್ಟಡವನ್ನೂ ಕೆಡವಬೇಕಾಗಿತ್ತು. ಫೆ. 25ರಂದು ನಡೆದ ನಿರ್ಣಾಯಕ ಸಭೆಗೆ ಕೆಐಆರ್ ಡಿಎಲ್ ನವರು ಸಭೆಗೆ ಹಾಜರಾಗದೇ ಇರುವುದರಿಂದ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ.
– ಮಹಾಂತೇಶ್ ಭಜಂತ್ರಿ,
ಪಿಡಿಒ, ಪಡು ಪೆರಾರ ಗ್ರಾ.ಪಂ. ಸುಬ್ರಾಯ ನಾಯಕ್, ಎಕ್ಕಾರು