Advertisement

‘ಪಡುಮಲೆ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವಾಗಲಿ’

04:37 PM Oct 15, 2017 | |

ಬಡಗನ್ನೂರು: ಪಡುಮಲೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.

Advertisement

ಬಡಗನ್ನೂರು ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಮನೆ ಮನೆ ಭೇಟಿ ನೀಡಿ ಸಿದ್ದರಾಮಯ್ಯ ಅವರ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯಕ್ಕೆ ಉದಯ ಕುಮಾರ್‌ ಪಡುಮಲೆ ಅವರ ಮನೆಯಲ್ಲಿ ಸಾಧನೆ ಭಿತ್ತಿ ಪತ್ರ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಂಕಪಾಲ ಬೆಟ್ಟ ಅಭಿವೃದ್ಧಿಗೆ ಅನುಮೋದನೆ
ಪಡುಮಲೆ ಕೋಟಿ-ಚೆನ್ನಯರ ಹುಟ್ಟೂರಿನ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಣೆಯಾದ 5 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರು, ಎಸಿ ಹಾಗೂ ನಾನು ಕುಳಿತು ಚರ್ಚಿಸಿದ್ದು, ಅದಕ್ಕೆ ಅನುಮೋದನೆ ದೊರಕಿದೆ. ಸದ್ಯದಲ್ಲಿಯೇ ಶಿಲಾನ್ಯಾಸಗೊಂಡು ಸಂಕಪಾಲ ಬೆಟ್ಟದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಬೆಟ್ಟದ ಮಧ್ಯಭಾಗದಲ್ಲಿ ಸಮಾರು 30 ಅಡಿ ಎತ್ತರದ ಮೂರು ಪ್ರತಿಮೆಗಳನ್ನು ಅಳವಡಿಸಲಾಗುವುದು. ಮಧ್ಯದಲ್ಲಿ ದೇಯಿಬೈದ್ಯೆತಿ ಎಡ ಮತ್ತು ಬಲ ಭಾಗದಲ್ಲಿ ಕೋಟಿ-ಚೆನ್ನಯರ ಪ್ರತಿಮೆ ಸ್ಥಾಪನೆಯಾಗಲಿದೆ. ಬೆಟ್ಟದ ಮಧ್ಯಭಾಗದಿಂದ ಎರಡು ಕವಲುಗಳಾಗಿ ಬೆಟ್ಟದ ಸುತ್ತಲೂ ಮೆಟ್ಟಲು ಮತ್ತು ಕಥಾನಕಗಳು, ಥೀಮ್‌ ಪಾರ್ಕ್‌, ಗ್ರಂಥಾಲಯ, ಓಪನ್‌ ಥಿಯೇಟರ್‌, ಶೌಚಾಲಯ ಹಾಗೂ ಕಾರ್ಯಾಲಯದ ಕಾಮಗಾರಿ ನಡೆಯಲಿದೆ. ಇದರಲ್ಲಿ 20 ಲಕ್ಷ ರೂ.ಗಳನ್ನು ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಲು ಸಂಬಂಧಪಟ್ಟವರು ಮನವಿ ನೀಡಿದ್ದಾರೆ. ಇದನ್ನು ಕೂಡಲೇ ಮುಂಜೂರಾತಿಗೊಳಿಸುವ ಬಗ್ಗೆ ಭರವಸೆ ನೀಡಿದರು.

ಮೈಂದನಡ್ಕ -ಸುಳ್ಯಪದವು ರಸ್ತೆ ಈಗಾಗಲೇ ಕಾಮಗಾರಿ ಈಗಾಗಲೇ ಪ್ರಾರಂಭದ ಆಗಿದೆ. ಡಿಸೆಂಬರ್‌ ತಿಂಗಳೊಳಗೆ ಎಲ್ಲ ಕೆಲಸಗಳು ಮುಗಿಯಬೇಕು. ಹನುಮಗಿರಿ- ಪಡುಮಲೆ ರಸ್ತೆಯನ್ನು ನಬಾರ್ಡ್‌ಗೆ ಬರೆಯಲಾಗಿದೆ ಎಂದರು. ಇದಕ್ಕಿಂತ ಮೊದಲು ಶಾಸಕಿ ಪಡುಮಲೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರಕಾರ ಜನರ ಮನ ಮುಟ್ಟುವ ಜನಪರ ಕೆಲಸ ಮಾಡಿದೆ. ರೈತರ ಸಾಲ ಮನ್ನಾ, ಅನ್ನಭಾಗ್ಯ, ಕ್ಷೀರಭಾಗ್ಯ, ಒಂದು ರೂಪಾಯಿಗೆ ಅಕ್ಕಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, 94ಸಿ ಮೂಲಕ ಮನೆ ಇಲ್ಲದ ಫ‌ಲಾನುಭವಿಗಳಿಗೆ ನಿವೇಶನ ಇತ್ಯಾದಿ ಯೋಜನೆಗಳು ಜನರನ್ನು ತಲುಪಿವೆ. ಅಭಿವೃದ್ಧಿ ನಿಟ್ಟಿನಲ್ಲಿ ಕಾಂಗ್ರೆಸ್‌ ಸರಕಾರ ಪ್ರಾಮಾಣಿಕವಾಗಿ ಮಾಡಿರುವ ಕಾರ್ಯಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.

Advertisement

ನಗರ ಪ್ರಾಧಿಕಾರದ ಅಧ್ಯಕ್ಷ ಕೌಶಲ್ಯ ಪ್ರಸಾದ್‌ ಶೆಟ್ಟಿ, ಮಾಜಿ ಮಂಡಲ ಉಪಪ್ರಧಾನ ಬಾಲಕೃಷ್ಣ ರೈ ಕುದ್ಕಾಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ.ಸಿ. ಪಾಟಾಳಿ ಪಡುಮಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಸಂಜೀವ ರೈ ಕೆ.ಪಿ., ಶ್ರೀ ಪೂಮಾಣಿ -ಕಿನ್ನಿಮಾಣಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್‌ ಭಟ್‌, ಗ್ರಾಮ ಪಂಚಾಯತ್‌ ಸದಸ್ಯರಾದ ಗೋಪಾಲಕೃಷ್ಣ ಸುಳ್ಯಪದವು, ಸವಿತಾ ಪದಡ್ಕ, ವಿಜಯಲಕ್ಷ್ಮೀ ಮೇಗಿನಮನೆ, ಪ್ರಗತಿಪರ ಕೃಷಿಕ ಕೃಷ್ಣ ರೈ ಕುದ್ಕಾಡಿ, ಪಡುಮಲೆ ಜುಮಾ ಮಸೀದಿ ಉಪಾಧ್ಯಕ್ಷ ಪಕ್ರುದ್ದೀನ್‌ ಹಾಜಿ, ಕಾರ್ಯದರ್ಶಿ ಪಿ.ಬಿ. ಇಬ್ರಾಹಿಂ, ಉದಯ ಕುಮಾರ್‌ ಶರವು, ಪ್ರಗತಿಪರ ಕೃಷಿಕ ಆದಂ ಕುಂಞಿ ಹಾಜಿ ಕುಕ್ಕಾಜೆ, ಆಲಿಕುಂಞಿ ಕಾವುಂಜ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು. ಗ್ರಾಮ ಪಂಚಾಯತ್‌ ಸದಸ್ಯ ಗುರುಪ್ರಸಾದ್‌ ರೈ ಕುದ್ಕಾಡಿ ಸ್ವಾಗತಿಸಿ, ವಂದಿಸಿದರು.

ಹೈಟೆಕ್‌ ಶೌಚಾಲಯ
ಪದಡ್ಕ ಎಸ್ಸಿ , ಎಸ್‌ಟಿ ಕಾಲನಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಬಾತ್‌ ರೂಮ್, ಹೇರ್‌ ಡ್ರೈಯರ್‌, ಶೌಚಾಲಯ, ಬಟ್ಟೆ ಒಗೆಯುವ ಸೌಲಭ್ಯಗಳು ಇರಲಿವೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next