Advertisement
ಅವರು ಶನಿವಾರ ಉಡುಪಿ ತಾಲೂಕಿನ ಮಲ್ಪೆ ಪಡುಕರೆಯಲ್ಲಿ 16.91 ಕೋ. ರೂ. ಅನುದಾನದಲ್ಲಿ ನಿರ್ಮಾಣಗೊಂಡ ಮಲ್ಪೆ ಪಡುಕರೆ ಸಂಪರ್ಕ ಸೇತುವೆ ಉದ್ಘಾಟಿಸಿ ಮಾತನಾಡಿದರು. ಮಲ್ಪೆ-ಪಡುಕರೆ ನರ್ಮ್ ಬಸ್ಸು ಮಲ್ಪೆ-ಪಡುಕರೆ ಸಂಪರ್ಕಿಸುವ ಸೇತುವೆ ನಿರ್ಮಾಣವಾದರೆ ಸಾಲದು ಸಾರಿಗೆ ಸಂಪರ್ಕ ಕಲ್ಪಿಸಲು ಮಲ್ಪೆಯಿಂದ ಕೈಪುಂಜಾಲು ಪಡುಕರೆ ವರೆಗೆ 3 ನರ್ಮ್ ಬಸ್ಸಿನ ವ್ಯವಸ್ಥೆ ಮಾಡಲು ಈಗಾಗಲೇ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾ. 21ರಂದು ನಡೆಯುವ ಆರ್‌ಟಿಎ ಸಭೆಯಲ್ಲಿ ಬಸ್ಸುಗಳಿಗೆ ಪರವಾನಗಿ ಸಿಗಲಿದೆ ಎಂದರು.
ಮೀನುಗಾರಿಕಾ ಇಲಾಖೆಗೆ ಈ ಬಾರಿಯ ಬಜೆಟ್‌ನಲ್ಲಿ 337 ಕೋ. ರೂ. ಕಾದಿರಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರರಿಗೆ ಡೀಸೆಲ್ ಸಬ್ಸಿಡಿಗಾಗಿ 157 ಕೋ. ರೂ. ಮೀಸಲಿಡಲಾಗಿದೆ. ಅಕ್ರಮ-ಸಕ್ರಮದಲ್ಲಿ ಹೊಸ ಬೋಟ್ ಮಾಡುವವರಿಗೆ ಡೀಸೆಲ್ ಸಬ್ಸಿಡಿ ಸಿಗುತ್ತಿಲ್ಲ ಎಂಬ ಮೀನುಗಾರ ಮುಖಂಡರು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, ಎಪ್ರಿಲ್ 1ರಿಂದ ಸಾಧ್ಯತಾ ಪತ್ರ ಇಲ್ಲದ ಮತ್ತು ಬ್ಯಾಂಕ್ ಖಾತೆ ಇಲ್ಲದ ಮೀನುಗಾರರಿಗೆ ಕೂಡ ಸಬ್ಸಿಡಿ ಮೊತ್ತ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. 10 ಸಾವಿರ ದೋಣಿಗಳಿರುವ ಗುಜರಾತ್‌ನಲ್ಲಿ ಡೀಸೆಲ್ ಸಬ್ಸಿಡಿ ಕೊಡುವುದು ಕೇವಲ 100 ಕೋ. ರೂ., ಮಹಾರಾಷ್ಟ್ರ 6,700 ದೋಣಿಗಳಿಗೆ ಸಿಗುವುದು 85 ಕೋ. ರೂ., ಆದರೆ ಕರ್ನಾಟಕದಲ್ಲಿರುವ ಕೇವಲ 3,700 ದೋಣಿಗಳಿಗೆ 157 ಕೋ. ರೂ. ಸಬ್ಸಿಡಿ ಡೀಸೆಲ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
Related Articles
Advertisement
ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹ ಮೂರ್ತಿ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ನಗರಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಕಕ್ಕುಂಜೆ, ನಗರಸಭಾ ಸದಸ್ಯರಾದ ವಿಜಯ್ ಕುಂದರ್, ಪ್ರಶಾಂತ್ ಅಮೀನ್, ನಾರಾಯಣ ಪಿ. ಕುಂದರ್, ಹಾರ್ಮಿಸ್ ನೊರೊನ್ಹ, ಜನಾರ್ದನ ಭಂಡಾರ್‌ಕಾರ್, ಯುವರಾಜ್, ಪ್ರಶಾಂತ್ ಭಟ್, ಗಣೇಶ್ ನೆರ್ಗಿ, ವಿಜಯ ಮಂಚಿ, ವಿಜಯ ಪೂಜಾರಿ, ಚಂದ್ರಕಾಂತ್, ಸೇಲಿನಾ ಕರ್ಕಡ, ಶಾಂತರಾಮ ಸಾಲ್ವಂಕರ್, ಲತಾ ಆನಂದ್, ಹೇಮಲತಾ, ರಮೇಶ್ ಪೂಜಾರಿ, ಗೀತಾ ಶೇಟ್, ಶಶಿರಾಜ್, ಸುಕೇಶ್ ಕುಂದರ್, ತಹಶೀಲ್ದಾರ್ ಮಹೇಶ್ಚಂದ್ರ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಅಖೀಲ ಕರ್ನಾಟಕ ಪಸೀìನ್ ಮೀನುಗಾರ ಸಂಘದ ಗುರುದಾಸ್ ಬಂಗೇರ, ಕೋಟ ಉದ್ಯಮಿ ಆನಂದ ಸಿ. ಕುಂದರ್, ಮಲ್ಪೆ ಪಡುಕರೆ ಸೇತುವೆ ಮೇಲುಸ್ತುವಾರಿ ಸಮಿತಿ
ಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಯೋಜಕ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಬೋಳೂರು ಉಪಸ್ಥಿತರಿದ್ದರು. ಮಲ್ಪೆ ಪಡುಕರೆ ಜನತೆ ಪರವಾಗಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಸಮ್ಮಾನಿಸಲಾಯಿತು.
ನಗರಸಭಾ ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿದರು. ಸತೀಶ್‌ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಅಮೀನ್ ಪಡುಕರೆ ವಂದಿಸಿದರು.