ಮಲ್ಪೆ: ಕಿದಿಯೂರು ಪಡುಕರೆ ಸಮುದ್ರತೀರದಲ್ಲಿ ಗಾಯಗೊಂಡ ಕುಲೇಜ್ ಮೀನೊಂದು ಬುಧವಾರ ಬೆಳಗ್ಗೆ ಸ್ಥಳೀಯ ಮೀನುಗಾರ ಗಣೇಶ್ ಮೈಂದನ್ ಅವರಿಗೆ ಸಿಕ್ಕಿದೆ.
ಸಮುದ್ರದ ದಂಡೆಯಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದು ಮೀನನ್ನು ಮನೆಗೆ ಕೊಂಡೊಯ್ದು ಮೂರುವರೆ ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಸುಮಾರು 12 ಕೆ. ಜಿ. ತೂಕದ ಭಾರ ಮೂರುವರೆ ಅಡಿ ಉದ್ದದ ಮೀನನ್ನು ನೋಡಲು ಸುತ್ತಮುತ್ತಲಿನ ಮಕ್ಕಳು ಮುಗಿಬಿದ್ದಿದರು.
ಸಣ್ಣ ದೋಣಿಗಳು ತಗಲಿ ಅಥವಾ ಸಮುದ್ರದ ತೆರೆಯೊಂದಿಗೆ ಕಲ್ಲು ಬಂಡೆಗೆ ಬಡಿದು ಗಾಯಗೊಂಡಿರಬಹುದೆಂದು ಅಂದಾಜಿಸಲಾಗಿದೆ.
ಗಾಳದಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುವ ಬಸಂತ್ ಕುಮಾರ್ ಅವರ ಪ್ರಕಾರ ದೊಡ್ಡಗಾತ್ರದ ಕುಲೇಜ್ ಮೀನಿನ ಬೆನ್ನ ಮೇಲೆ ಗಾಯವಾದಾಗ ಸಣ್ಣ ಮೀನುಗಳು ಬಂದು ಗಾಯವನ್ನು ಕುಕ್ಕಿ ತಿಂದಾಗ ಇನ್ನಷ್ಟು ದೊಡ್ಡದಾಗುತ್ತದೆ. ಇದರಿಂದ ಅದು ತನ್ನ ದೇಹದ ಶಕ್ತಿಯನ್ನು ಕಳೆದುಕೊಂಡು ತೀರಕ್ಕೆ ತೇಲಿ ಬಂದು ಬೀಳುತ್ತವೆ ಎನ್ನುತ್ತಾರೆ.