Advertisement
ಶಿರ್ವದಲ್ಲಿನ ಪಶು ವೈದ್ಯಾಧಿಕಾರಿ ಡಾ| ಅರುಣ್ ಕುಮಾರ್ ಹೆಗ್ಡೆ ಅವರು ಕಾಪು ತಾ| ಪಶು ವೈದ್ಯಾಧಿಕಾರಿ ಸೇವೆಯನ್ನೂ ನಿಭಾಯಿಸುತ್ತಿದ್ದಾರೆ. ಅವರೇ ಪಡುಬಿದ್ರಿಯ ಪಶು ವೈದ್ಯಕೀಯ ಆಸ್ಪತ್ರೆಯಲ್ಲೂ ನಿಯೋಜನೆಯಲ್ಲಿದ್ದಾರೆ. ಇನ್ನೋರ್ವ ಪಶು ವೈದ್ಯಾಧಿಕಾರಿ ಕಟಪಾಡಿ ಹಾಗೂ ಪಡುಬೆಳ್ಳೆ ಆಸ್ಪತ್ರೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಡಿಯ ಕಾಪು ತಾ| ನಲ್ಲಿ 29 ಹುದ್ದೆಗಳಿದ್ದು ಕೇವಲ ನಾಲ್ಕು ಹುದ್ದೆಗಳಷ್ಟೇ ಭರ್ತಿಯಾಗಿವೆ. ಇನ್ನುಳಿದ 25 ಹುದ್ದೆಗಳ ಗತಿಯೇ ಅಯೋಮಯವಾಗಿದೆ. ಸದ್ಯ ಇರುವ 2ವೈದ್ಯರು ಹಾಗೂ 2 ಮಂದಿ ನಿರೀಕ್ಷಕರು ತಾಲೂಕಿನ 5ಪಶು ಚಿಕಿತ್ರಾಲಯ ಹಾಗೂ 3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳ ನಡುವೆ ಅತ್ತಿತ್ತ ಓಡಾಡಿಕೊಳ್ಳುತ್ತಲೇ, ಮೇಲಾಗಿ ಕೆಎಂಎಫ್ ಪಶು ವೈದ್ಯರ ಸಹಕಾರದೊಂದಿಗೆ ಇಲಾಖಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವರು. ತಾ| ಪಶು ವೈದ್ಯಧಿಕಾರಿ ಅರುಣ್ ಕುಮಾರ್ ಹೆಗ್ಡೆ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ಸಿಬಂದಿ ಕೊರತೆ ಇಲಾಖೆಯನ್ನು ಕಾಡುತ್ತಿದೆ. ಪಶು ವೈದ್ಯಾಧಿಕಾರಿಯಾಗಿ ಇಲಾಖಾ ಕರ್ತವ್ಯಗಳ ನಡುವೆ ವಿವಿಧ ಗ್ರಾಮಗಳ ಗ್ರಾಮಸಭೆಗೂ ಹಾಜರಾಗಬೇಕಿದೆ. ಸರಕಾರದಿಂದ 400 ಪಶು ವೈದ್ಯಾಧಿಕಾರಿಗಳ ನೇಮಕಾತಿಯು 2 ವರ್ಷಗಳೇ ಹಿಂದೆಯೇ ಆಗಿದ್ದರೂ ವಿಚಾರವು ನ್ಯಾಯಾಲಯದ ಮೆಟ್ಟಲೇರಿ ಕುಳಿತಿದೆ. ಪ್ಯಾರಾ ಸ್ಟಾಫ್ ನೇಮಕಾತಿಗಳು ನಡೆಯುತ್ತಿಲ್ಲ. ಸರಕಾರದ ಮಟ್ಟದಲ್ಲಿ ಈ ಪ್ರಕ್ರಿಯೆಗಳು ನಡೆಯಬೇಕಾಗಿದೆ.
Advertisement
ಪಡುಬಿದ್ರಿ: ಕಾರ್ಯಾಚರಿಸದ ಹಳ್ಳಿಗಳ ಪಶು ಚಿಕಿತ್ಸಾಲಯ
07:24 PM Dec 01, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.