Advertisement
ಇದೇ ವೇಳೆ ಹಿಂದಿನ ಘಟನೆಗಳಲ್ಲಿ ಕಾರ್ಮಿಕರ ವಿರುದ್ಧ ಹೂಡಲಾದ ಸೊತ್ತು ಹಾನಿ ಕೇಸು, ಆಂತರಿಕ ವಿಚಾ ರಣೆಗಳನ್ನು ವಾಪಸ್ ತೆಗೆದುಕೊಳ್ಳಲು ಸುಜ್ಲಾನ್ ಆಡಳಿತ ಒಪ್ಪಿಕೊಂಡಿದೆ. ಸುಜ್ಲಾನ್ ವಿಂಡ್ ಟರ್ಬೈನ್ ಯುನಿಟ್‌ನ 40 ಕಾರ್ಮಿಕರ ಪುನರ್ ನೇಮಕ ಅಥವಾ ಅಂತಿಮ ಪ್ಯಾಕೇಜ್ ಘೋಷಣೆಗಳ ಕುರಿತಾದ ಒಪ್ಪಂದ ವನ್ನೂ ಅಂತಿಮಗೊಳಿಸಲಾಗುತ್ತಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾಧ್ಯಮಗಳಿಗೆ ತಿಳಿಸಿದರು.
ಕಾರ್ಮಿಕರೊಂದಿಗಿನ ಒಪ್ಪಂದಕ್ಕೆ ಕಂಪೆನಿಯ ಪೂನಾದ ಕಾರ್ಪೊರೆಟ್ ಕಚೇರಿಯಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಗಬೇಕಿದ್ದು, ಬಳಿಕ ವಾರದೊಳಗೆ ಲಾಕೌಟ್ ತೆರವಾಗಲಿದೆ. ಅಲ್ಲಿವರೆಗಿನ ಸಂಬಳ ಪಾವತಿಸುವುದಾಗಿ ಕಂಪೆನಿ ಹೇಳಿದೆ ಎಂದು ದ. ಕ., ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ತಿಳಿಸಿದರು. ಸಂಬಳ ಏರಿಕೆ ಸದ್ಯ ಇಲ್ಲ
ವ್ಯಾವಹಾರಿಕ ನಷ್ಟದ ಕಾರಣಗಳಿಂದಾಗಿ ಕಂಪೆನಿಯಿಂದ ಒಂದು ವರ್ಷ ಸಂಬಳದ ಏರಿಕೆಯಿರುವುದಿಲ್ಲ. 54 ಮೀಟರ್‌ಗಳ ಬ್ಲೇಡ್(ಗಾಳಿ ಯಂತ್ರದ ರೆಕ್ಕೆ)ಗಳನ್ನು ತಿಂಗಳಿಗೆ 30ರಷ್ಟು ತಯಾರಿಸಬೇಕು. ಯಾವುದೇ ರೀತಿ ಯಲ್ಲಿ ಉತ್ಪಾದನೆಯು ಹೆಚ್ಚಿದ್ದಲ್ಲಿ ಕಾರ್ಮಿಕರಿಗೆ ಹೆಚ್ಚುವರಿ ಭತ್ತೆ ನೀಡಲಾಗುವುದು. ಉತ್ಪಾದನೆ ಕುಂಠಿತ ವಾದರೆ ಅರ್ಧ ಸಂಬಳ ಮಾತ್ರ ಎಂಬ ನಿಯಮ ಅಳ ವಡಿಸ ಲಾಗಿದೆ. ಕಾರ್ಮಿಕರೂ ಬದ್ಧತೆಯನ್ನು ಆಡಳಿತದ ಮುಂದೆ ವ್ಯಕ್ತಪಡಿಸಿದ್ದಾಗಿ ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್ ತಿಳಿಸಿದ್ದಾರೆ.
Related Articles
Advertisement