ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜ. 19ರಂದು ಆರಂಭಗೊಳ್ಳಲಿವೆ. ಮಾ. 11ರಂದು ನಡೆಯುವ ಮಂಡಲ ವಿಸರ್ಜನೆ ಸೇವಾ ಢಕ್ಕೆ ಬಲಿಯೊಂದಿಗೆ ಸಂಪನ್ನಗೊಳ್ಳಲಿದೆ.
ಪಡುಬಿದ್ರಿಯ ಈ ಶಕ್ತಿ ಆರಾಧನಾ ತಾಣಕ್ಕೆ ಸಂಬಂಧಪಟ್ಟ ಹೆಜಮಾಡಿ ಹಾಗೂ ಮುರುಡಿ ಬ್ರಹ್ಮಸ್ಥಾನದಲ್ಲಿ ಜ. 29 ಹಾಗೂ 31ರಂದು ನಡೆಯುವ ಸೇವೆಗಳ ಹೊರತಾಗಿ 35 ಢಕ್ಕೆಬಲಿ ಸೇವೆಗಳು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲೇ ನಿರ್ದಿಷ್ಟ ದಿನಗಳಲ್ಲಿ ನಡೆಯುವವು.
ಇಲ್ಲಿನ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ವನದುರ್ಗಾ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿನ ಈ ಬ್ರಹ್ಮಸ್ಥಾನದಲ್ಲಿನ ಢಕ್ಕೆಬಲಿ ಸೇವೆಯು ಜಿಲ್ಲೆಯ ಬೇರೆಲ್ಲೂ ಕಾಣಸಿಗದ ಬಲು ಅಪರೂಪದ ಸೇವಾ ವೈವಿಧ್ಯವಾಗಿ ಗುರುತಿಸಲ್ಪಟ್ಟಿದೆ. ಸಂಜೆಯ ಹೊರೆ ಕಾಣಿಕೆ ಮೆರವಣಿಗೆಯ ಮೂಲಕ ಈ ಪ್ರಕೃತಿ ಆರಾಧನಾ ತಾಣವಾಗಿರುವ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಫಲಪುಷ್ಪ, ಹಿಂಗಾರ, ಅಡಿಕೆ, ಬಾಳೆದಿಂಡು ಮುಂತಾದ ಪ್ರಕೃತಿ ಜನ್ಯ ವಸ್ತುಗಳಿಂದ ಈ ತಾಣವು ಸಾಲಂಕೃತಗೊಳ್ಳುತ್ತದೆ.
ಬಳಿಕ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ವೈದ್ಯ ವೃಂದದ ಢಕ್ಕೆ ನಿನಾದದೊಂದಿಗೆ ರಾತ್ರಿ ತಂಬಿಲ, ಢಕ್ಕೆಬಲಿ ಸೇವೆಗಳು ಮರುದಿನ ಮುಂಜಾವದ ವರೆಗೂ ಸಾಗುವವು. ಸಾವಿರಾರು ಭಕ್ತರು
ಮರಳಲ್ಲೇ ಆಸೀನರಾಗುವ ಈ ತಾಣದಲ್ಲಿ “ಮರಳು’ ಮಾತ್ರವೇ ಈ ಖಡೆYàಶ್ವರೀ ದೇವಿಯ ಪ್ರಧಾನ ಪ್ರಸಾದವೂ ಆಗಿರುತ್ತದೆ.