Advertisement
ಸಾರ್ವಜನಿಕರಿಗೆ ಕೊಳಚೆ ಓಕುಳಿಕಳೆದ 2 ತಿಂಗಳುಗಳಿಂದ ಕಾರ್ಕಳ ಜಂಕ್ಷನ್ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಪಡುಬಿದ್ರಿ ಗ್ರಾ. ಪಂ. ನ ಕೇರಿ ವಾರ್ಡ್‌ನ ಕೊಳಚೆ ನೀರು ಹೆದ್ದಾರಿಯಲ್ಲಿನ ಅರೆಬರೆ ಮೋರಿಯ ಮೂಲಕ ಹರಿದು ಕಾರ್ಕಳ ಜಂಕ್ಷನ್ ಬಳಿಯಲ್ಲಿ ಸಂಗ್ರಹಗೊಂಡಿದೆ. ಇದರಿಂದ ಅಲ್ಲಿಂದ ಹಾದು ಹೋಗುವ ಜನ ಸಾಮಾನ್ಯರಿಗೆ ವಾಹನ ಚಾಲಕರಿಗೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈ ನಿಂತ ನೀರಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳುತ್ತಿದೆ. ಜತೆಗೆ ಕೊಳಚೆ ನೀರು ರಸ್ತೆಯಲ್ಲೇ ಹರಿದು ಬಸ್ಸಿಗಾಗಿ ಕಾದು ನಿಲ್ಲುವ ಸಾರ್ವಜನಿಕರ ಮೇಲೆ ಸಿಂಪರಣೆಯಾಗುತ್ತಿದೆ.
ಕೊಳಚೆ ಸಮಸ್ಯೆ ಪರಿಹಾರ ಗ್ರಾ. ಪಂ. ಜವಾಬ್ದಾರಿಯಾಗಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ. ಪಂ. ಗೆ ಪತ್ರ ಬರೆಯಲಾಗುವುದು.
-ಡಾ | ಬಿ. ಬಿ. ರಾವ್, ವೈದ್ಯಾಧಿಕಾರಿ, ಪಡುಬಿದ್ರಿ ಪ್ರಾ.ಆ.ಕೇಂದ್ರ ಕೊಳಚೆ ಗುಂಡಿಗಳು ನಿರ್ಮಾಣವಾದರೆ ಪಂಚಾಯತ್ ಖಾಲಿ ಮಾಡಲಿದೆ
ಕೊಳಚೆ ಸಮಸ್ಯೆಯನ್ನು ಹಾಗೆಯೇ ಬಿಡಲಾಗದು. ಈ ಕುರಿತಾಗಿ ಕೇರಿಯ ನಿವಾಸಿಗಳಲ್ಲೇ ಅರಿವು ಮೂಡಿಸುವ ಕ್ರಮವನ್ನು ಪಂಚಾಯತ್ ಕೈಗೊಳ್ಳಲಿದೆ. ಮನೆ ಹಿತ್ತಿಲಲ್ಲೇ ಕೊಳಚೆ ಗುಂಡಿ ನಿರ್ಮಿಸುವಂತೆ ಮನವರಿಕೆ ಮಾಡಿಕೊಡಲಾಗುವುದು. ಅದನ್ನು ಸುಮಾರು 4 ತಿಂಗಳಿಗೊಮ್ಮೆ ಪಂಚಾಯತ್ ಖಾಲಿ ಮಾಡಿಸುವ ಕ್ರಮ ಕೈಗೊಳ್ಳಲಾಗುವುದು.
-ಪಂಚಾಕ್ಷರೀ ಸ್ವಾಮಿ,
ಪಂಚಾಯತ್ ಪಿಡಿಒ