Advertisement

Padubidriಕಂಚಿನಡ್ಕ ಟೋಲ್‌ ನಿರ್ಮಾಣಕ್ಕೆ ಯತ್ನ:ಅಧಿಕಾರಿಗಳನ್ನು ಹಿಮ್ಮೆಟ್ಟಿಸಿದ ಹೋರಾಟಗಾರರು

12:53 AM Aug 14, 2024 | Team Udayavani |

ಪಡುಬಿದ್ರಿ: ಸೋಮವಾರವಷ್ಟೇ ಟೋಲ್‌ ಸಂಬಂಧಿ ಸರಕು ಸರಂಜಾಮುಗಳನ್ನು ಇಳಿಸಲು ಬಿಡದ ಪಡುಬಿದ್ರಿ ಕಂಚಿನಡ್ಕ ರಾಜ್ಯ ಹೆದ್ದಾರಿ 1ರ ಟೋಲ್‌ ವಿರೋಧಿ ಹೋರಾಟಗಾರರು, ಸಂಜೆಯ ವೇಳೆ ಟೋಲ್‌ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಹಿಂಪಡೆಯಬೇಕೆಂಬ ನಿರ್ಣಯದೊಂದಿಗೆ ಇಂದೂ ಸಹಾ ಸ್ಥಳ ತನಿಖೆ, ಸರ್ವೇಗಳಿಗೆ ಆಗಮಿಸಿದ್ದ ಕೆಆರ್‌ಡಿಸಿಎಲ್‌ ಕಾರ್ಯಪಾಲಕ ಎಂಜಿನಿಯರ್‌ ರಘು ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹೇಮಂತ್‌ ಅವರನ್ನು ಬರಿಗೈಲಿ ಹಿಮ್ಮೆಟ್ಟಿಸಿದ್ದಾರೆ.

Advertisement

ಜನತೆಗಾಗಿ ಇರಬೇಕಾದ ಸರಕಾರವು ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸ್ಥಾಪಿಸಲುದ್ದೇಶಿ ಸಿರುವ ಟೋಲ್‌ ಗೇಟ್‌ಗೆ ಪಡುಬಿದ್ರಿಯಿಂದ ಕಾರ್ಕಳದ ವರೆಗಿನ 40 ಹಳ್ಳಿÛಗರ ವಿರೋಧವಿರುವುದಾಗಿ ಸರಕಾರಕ್ಕೆ ವರದಿ ನೀಡಿ ಎಂದು ಪಡುಬಿದ್ರಿ ಟೋಲ್‌ ವಿರೋಧಿ ಹೋರಾಟಗಾರರ ಸಮಿತಿಯ ಅಧ್ಯಕ್ಷ ಸುಹಾಸ್‌ ಹೆಗ್ಡೆ ನಂದಳಿಕೆ ಅಧಿಕಾರಿಗಳಿಗೆ ಈ ವೇಳೆ ತಿಳಿಸಿದರು.

ಒಮ್ಮೆ ಕಂಚಿನಡ್ಕಕ್ಕೆ ಆಗಮಿಸಿ ಹೋರಾಟಗಾರರು ಒಟ್ಟಾಗುತ್ತಿರುವು ದನ್ನು ಕಂಡು ಮತ್ತೆ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಎಂಜಿನಿಯರ್‌ಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ಸಂದರ್ಭ ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ವೈ, ಅಶೋಕ್‌ ಶೆಟ್ಟಿ, ದಿನೇಶ್‌ ಕೋಟ್ಯಾನ್‌, ನವೀನ್‌ ಎನ್‌. ಶೆಟ್ಟಿ , ಕರವೇ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮ್ಮದ್‌, ನವೀನ್‌ಚಂದ್ರ ಜೆ. ಶೆಟ್ಟಿ, ಮುಂತಾದವರು ಇದ್ದರು.

ಆ. 24ರಂದು ಬೃಹತ್‌ ಜನಾಂದೋಲನ
ಪಡುಬಿದ್ರಿ: ಪಡುಬಿದ್ರಿ-ಬೆಳ್ಮಣ್‌-ಕಾರ್ಕಳ ಟೋಲ್‌ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಆ. 24ರಂದು ಬೆಳಗ್ಗೆ 9ಕ್ಕೆ ಕಂಚಿನಡ್ಕದಿಂದ ಪಡುಬಿದ್ರಿ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರಸ್ತಾವಿತ ಕಂಚಿನಡ್ಕ ಟೋಲ್‌ಗೇಟನ್ನು ಹಿಂಪಡೆಯಲು ಬೃಹತ್‌ ಜನಾಂದೋಲನವನ್ನು ಹಮ್ಮಿಕೊಳ್ಳಲಾಡಿದೆ.

Advertisement

ಪ್ರಸ್ತಾವಿತ ಟೋಲ್‌ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆಸಲಾದ ಸಮಿತಿಯ ಸಭೆಯಲ್ಲಿ ಈ ಕುರಿತಾದ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಸುತ್ತಮುತ್ತಲ ಗ್ರಾಮಗಳ ಸಮಿತಿಯನ್ನು ರಚಿಸಲಾಗಿದ್ದು ಈ ಜನಾಂದೋಲನದಲ್ಲಿ ವಿದ್ಯಾರ್ಥಿಗಳು, ಕೈಗಾರಿಕಾ ಕಾರ್ಮಿಕರು, ಬಸ್‌ ಮಾಲಕರ ಸಂಘಟನೆಗಳು, ಕಾರು, ಟೆಂಪೋ ಚಾಲಕ ಮಾಲಕರು ಸೇರಿದಂತೆ ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next