Advertisement
ನಿರ್ವಹಣ ಘಟಕದ ಕಾರ್ಯ ಕರ್ತೆಯರಿಂದ ಪಂಚಾಯತ್ ಸದಸ್ಯರು ತಮಗೆ ಬೇಕಾದ ಮಾಹಿತಿ ಸಂಗ್ರಹಿಸಿದರು. ದಿನಕ್ಕೆರಡು ಬಾರಿ ಗ್ರಾಮದ ಸುಮಾರು 300 ಮನೆಗಳು, ಹೊಟೇಲು ಮತ್ತು ಅಂಗಡಿ, ಮುಂಗಟ್ಟುಗಳಿಂದ ಸಂಗ್ರಹಿಸಿ ತರುವ ತ್ಯಾಜ್ಯಗಳನ್ನು ಬೇರ್ಪಡಿಸುವ ಕ್ರಮ ಗಳ ಮಾಹಿತಿಯನ್ನು ಕೇಳಿ ಪಡೆದು ಕೊಂಡರು. ಹಸಿ ತ್ಯಾಜ್ಯವನ್ನು ಗೊಬ್ಬರ ಗುಂಡಿಗೆ ಹಾಕಿ ಮುಂದಿನ ಐದು ತಿಂಗಳಲ್ಲಿ ತಮ್ಮಲ್ಲಿ ಗೊಬ್ಬರ ತಯಾರಾಗುತ್ತಿರುವ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹಸಿರು ತ್ಯಾಜ್ಯಗಳಿಂದಲೇ ಸಾಕಲಾಗುತ್ತಿರುವ ಎರಡು ಗೋವುಗಳುಳ್ಳ ಗೋಶಾಲೆಯನ್ನು, ತ್ಯಾಜ್ಯ ಸಂಸ್ಕರಣೆಯಿಂದಲೇ ತಯಾರಾಗು ತ್ತಿರುವ ವಿವಿಧ ತೋಟಗಾರಿಕೆ ಉತ್ಪನ್ನ ಗಳನ್ನು ವೀಕ್ಷಿಸಿದರು. ನಿಟ್ಟೆ ಗ್ರಾ. ಪಂ. ಪಿಡಿಒ ಮಾಧವ ರಾವ್ ದೇಶಪಾಂಡೆ ಮಾತನಾಡಿ ಪ್ರತೀ ದಿನದ ತ್ಯಾಜ್ಯಗಳನ್ನು ಅಂದೇ ವಿಂಗಡಿಸುತ್ತಿದ್ದು ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ತಮಗೆ ಬೆಂಬಲ ನೀಡುತ್ತಿದ್ದಾರೆ. ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ತಾವು ಪರಿವರ್ತಿಸಲಾಗುತ್ತಿದ್ದು, ನಿಟ್ಟೆ ಗ್ರಾಮದ ಮದನಾಡು ಎಂಬಲ್ಲಿ 1.5ಎಕ್ರೆ ಜಾಗವನ್ನು ನಿಟ್ಟೆ ಗ್ರಾ.ಪಂ.ಗೆ ನೀಡಿದ್ದು ದೊಡ್ಡ ಮಟ್ಟದಲ್ಲೇ ಈಗ ಘನ, ದ್ರವ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ಅವರು ಹೇಳಿದರು.
ಪಡುಬಿದ್ರಿ ಗ್ರಾ.ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಘನ ದ್ರವ ತಾಜ್ಯಗಳ ವಿಲೇವಾರಿಗೆ ತಮಗೆ ಜಿಲ್ಲಾಡಳಿತ ಸ್ಥಳಾವಕಾಶ ನೀಡಬೇಕು. ಲ್ಯಾಂಡ್ ಆರ್ಮಿಗೆ ಗುತ್ತಿಗೆ ವಹಿಸಿಕೊಡಲಾಗಿದ್ದು ಮಾರುಕಟ್ಟೆ ಬದಿಯಲ್ಲೇ ಈ ಘಟಕವನ್ನು ಆರಂಭಿಸುವ ಯೋಜನೆಯಿದೆ. ಮತ್ತೆಲ್ಲೂ ಸಾಧ್ಯವಾಗ ದಿದ್ದಲ್ಲಿ ಪಂಚಾಯತ್ ವಠಾರದಲ್ಲೇ ಈ ಯೋಜನೆಯ ಅನುಷ್ಟಾನಕ್ಕೆ ಪಂ. ಬದ್ಧವಿರುವುದಾಗಿ ಹೇಳಿದರು.