Advertisement
ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಾಂಡವಿ ಬಿಲ್ಡರ್ ಆ್ಯಂಡ್ ಡೆವಲಪರ್ನ ಆಡಳಿತ ನಿರ್ದೇಶಕ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸುವರು. ನ್ಯಾಶನಲ್ ಕೌನ್ಸಿಲ್ ಸದಸ್ಯ ಕುಮಾರಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
Related Articles
Advertisement
ಈ ಗ್ಲಾಸ್ ಬಳಕೆಯಿಂದ ಗ್ಲಾಸ್‌ನಲ್ಲಿ ತೇವಾಂಶ ಸಂಗ್ರಹವಾಗುವುದಿಲ್ಲ. ಬಹು ಮಹಡಿ ಕಟ್ಟಡಗಳಲ್ಲಿ ಬಳಸಲ್ಪಡುವ ಈ ಗ್ಲಾಸ್ ಯಾವುದೇ ಕಾರಣಕ್ಕೂ ಒಡೆದು ಹೋಗದೆ, ಬಿರುಕು ಬಿಡುವುದಿಲ್ಲ. ತೂಕ, ಗಾಳಿ, ಮತ್ತು ಬಿಸಿಲನ್ನು ತಡೆದುಕೊಳ್ಳುವ ಗಟ್ಟಿಮುಟ್ಟಾದ ಈ ಗ್ಲಾಸ್ ಹಲವು ವಿಧಗಳಲ್ಲಿ ತಯಾರಾಗಲಿವೆ. ಸೌಂಡ್ ಪ್ರೂಫ್ ಮತ್ತು ಅತ್ಯಂತ ಸುರಕ್ಷಿತ ಗ್ಲಾಸ್ ಇದಾಗಿದ್ದು, ಡವ್ ಸೀಲ್’ ಎನ್ನುವ ಬ್ರ್ಯಾಂಡ್‌ನಲ್ಲಿ ಉತ್ಪಾದನೆಗೊಳ್ಳುತ್ತಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪಡುಬಿದ್ರಿಯಲ್ಲಿ ತಯಾರಾಗುವ ಈ ಗ್ಲಾಸ್ ಫ್ಯಾಕ್ಟರಿಯಲ್ಲಿ ದಿನವೊಂದಕ್ಕೆ 500 ಚ.ಅಡಿ. ಮೀಟರ್ ಗ್ಲಾಸ್ ತಯಾರಿಸಲಾಗುತ್ತದೆ.
4 ರಿಂದ 9 ಎಂಎಂನ ಸಿಂಗಲ್ ಗ್ಲಾಸ್, 18ರಿಂದ 50 ಇಂಚ್‌ನ ದಪ್ಪದ ಡಬಲ್ ಮತ್ತು ತ್ರಿಬಲ್ ಗ್ಲಾಸ್‌ಗಳು ತಯಾರಿಸಲ್ಪಡುತ್ತದೆ. ಗ್ರಾಹಕರ ವಿವಿಧ ಬೇಡಿಕಗೆ ಅನುಗುಣವಾಗಿ ತಯಾರಿಸಿಕೊಡಲಾಗುತ್ತದೆ. ಈ ಗ್ಲಾಸನ್ನು ವಾಣಿಜ್ಯ ಮತ್ತು ವಸತಿ ಕಟ್ಟಡಗಳ ಮೆರುಗು ಹೆಚ್ಚಿಸಲು ಸ್ಥಿರ ಮತ್ತು ಕಾರ್ಯನಿರ್ವಹಿಸಬಹುದಾದ ಕಿಟಕಿಗಳು, ಕರ್ಟನ್ ವಾಲ್ಸ್ ಮತ್ತು ಅಂಗಡಿ ಮುಂಗಟ್ಟುಗಳು, ರೈಲ್ವೇ ಕೋಚ್‌ಗಳು, ನಾನ್-ವಿಷನ್ (ಸ್ಪಾಂಡ್ರೆಲ…) ಲೊಕೇಶನ್, ಡೀಪ್ ಫ್ರೀಜರ್ ಮತ್ತು ರೆಫ್ರಿಜರೇಟರ್‌ಗಳು, ಪಾರ್ಟಿಶನ್ ವಾಲ್ಸ್, ರೆಸ್ಟೋರೆಂಟ್‌ಗಳು, ಮೆಟ್ರೋ ರೈಲ್ವೇ, ಏರ್‌ಪೋರ್ಟ್ಸ್, ಬೇಕರಿ ರೆಫ್ರಿಜರೇಟರ್, ಬಾತ್‌ರೂಮ್, ಆಸ್ಪತ್ರೆಗಳಲ್ಲಿ ಬಳಸಲಾಗುತ್ತದೆ.
ಸಂಸ್ಥೆಯ ಹಿನ್ನೆಲೆ
1990ರಲ್ಲಿ ಸ್ಥಾಪನೆಗೊಂಡ ಶ್ರೀ ದೇವಿ ಗ್ಲಾಸ್ ಹೌಸ್ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅಭಿವೃದ್ಧಿ ಹೊಂದುತ್ತಾ ಸಾಗಿ ಅನಂತರ 2019ರಲ್ಲಿ “ಫಾರ್ಚೂನ್ ಸೇಫ್ಟಿ ಗ್ಲಾಸ್’ ಫ್ಯಾಕ್ಟರಿ ಆರಂಭಗೊಂಡು ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿದೆ. ಈಗಾಗಲೇ ಕರ್ನಾಟಕ, ಗೋವಾ, ಕೇರಳ ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಇದೀಗ ಪ್ರಾರಂಭಿಸಲಾದ “ಇನ್ಸುಲೇಟೆಡ್ ಗ್ಲಾಸ್’ನ ನೂತನ ಘಟಕ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: www.fortunesaftyglass.com ಸಂಪರ್ಕಿಸಲು ಮಾಲಕ ಸುರೇಶ್ ಸುಮನಾ ನಾಯ್ಕ ತಿಳಿಸಿದ್ದಾರೆ.
ಪ್ರದರ್ಶನ-ಪ್ರಾತ್ಯಕ್ಷಿಕೆ: ನ. 20ರಂದು ಉದ್ಘಾಟನೆ ಕಾರ್ಯಕ್ರಮ ಪ್ರಯುಕ್ತ ಟಫೆನ್ ಗ್ಲಾಸ್ ಎಷ್ಟರಮಟ್ಟಿಗೆ ಗಟ್ಟಿಯಾಗಿವೆ ಎಂದು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕ್ರಿಕೆಟ್ ಹಾರ್ಡ್ ಬಾಲ್ ಮೂಲಕ ಗ್ಲಸ್‌ನಿಂದ ತಯಾರಿಸಲ್ಪಟ್ಟ ವಿಕಟ್‌ಗಳಿಗೆ ಬೌಲಿಂಗ್ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಲ್ಯಾಮಿನೇಟೆಡ್ ಗ್ಲಾಸ್‌ಗಳನ್ನು ಸಾಲಾಗಿ ನಿಲ್ಲಿಸಿ ಅವುಗಳಿಗೆ ಹ್ಯಾಮರ್ ಮೂಲಕ ಹೊಡೆದು ಒಡೆಯಲು ಅವಕಾಶ ನೀಡಲಾಗುವುದು. ಸಂಸ್ತೆಯಲ್ಲಿ ತಯಾರಿಸಲ್ಪಡುವ ಹೀಟ್ ಸ್ಟ್ರೆಂಥನ್ಡ್ ಗ್ಲಾಸ್, ಈವಾ ಲ್ಯಾಮಿನೇಟೆಡ್ ಗ್ಲಾಸ್, ಬೆಂಡ್ ಗ್ಲಾಸ್, ಸ್ಮಾರ್ಟ್ ಗ್ಲಾಸ್, ಲೇಕರ್ಡ್ ಗ್ಲಾಸ್, ಡಿಸೈನರ್ ಗ್ಲಾಸ್, ಕಲರ್ ಲ್ಯಾಮಿನೇಟೆಡ್ ಗ್ಲಾಸ್ ಇತ್ಯಾದಿ ಗ್ಲಾಸ್‌ಗಳ ಪ್ರದರ್ಶನ ಏರ್ಪಡಿಸಲಾಗಿದೆ.